Tuesday, April 22, 2025
Google search engine

Homeರಾಜ್ಯಸುದ್ದಿಜಾಲಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ: ಜೀವ ಉಳಿಸಿದ ವೋಟ್ ಮಾಡಲು ಬಂದ ವೈದ್ಯ

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ: ಜೀವ ಉಳಿಸಿದ ವೋಟ್ ಮಾಡಲು ಬಂದ ವೈದ್ಯ


ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದಲ್ಲಿ ಎರಡನೇ ಹಂತದ ನಡೆಯುತ್ತಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಈವರೆಗೆ ೧೯.೨ ರಷ್ಟು ಮತದಾನವಾಗಿದೆ. ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಗೆ ಮತದಾನ ಮಾಡಲು ಆಗಮಿಸಿದ ಮಹಿಳೆಯ ಹೃದಯ ಸ್ತಂಭನವಾಗಿದ್ದು ಇದೇ ಮತಗಟ್ಟೆಗೆ ಮತದಾನ ಮಾಡಲು ಬಂದ ವೈದ್ಯ ಜೀವ ಉಳಿಸಿದ್ದಾರೆ.

ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಮಹಿಳೆ ಮತದಾನ ಮಾಡಲು ಬಂದಿದ್ದರು. ಈ ವಳೇ ಮಹಿಳೆಯ ಹೃದಯ ಸ್ತಂಭನವಾಗಿದೆ. ಇದೇ ಮತಗಟ್ಟೆಗೆ ಮತದಾನ ಮಾಡಲು ಬಂದಿದ್ದ ಬೊಮ್ಮಸಂದ್ರದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಜೀವ ಉಳಿಸಿದರು.

ಈ ಸಂಬಂಧ ವೈದ್ಯ ಗಣೇಶ್ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ೫೦ ಆಸುಪಾಸಿನ ಮಹಿಳೆಯೊಬ್ಬರು ಕ್ಯಾನ್‌ನಲ್ಲಿ ನೀರು ಕುಡಿಯಲು ಬಂದಿದ್ದರು. ನಾನು ಅವರ ನಾಡಿಮಿಡಿತವನ್ನು ಪರಿಶೀಲಿಸಿದೆ. ನಾಡಿಮಿಡಿತ ತುಂಬಾ ಕಡಿಮೆಯಾಗಿದೆ ಅಂತ ಕಂಡುಬಂತು. ಕಣ್ಣುಗಳು ಮೇಲಕ್ಕೆತ್ತಿ ಧಿಡೀರನೆ ಕುಸಿದರು. ಅವರ ದೇಹದಲ್ಲಿ ಚಲನವಲ ಇರಲಿಲ್ಲ. ಅವರು ಉಸಿರುಗಟ್ಟುತ್ತಿದ್ದರು. ನಾನು ತಕ್ಷಣ ಸಿಪಿಆರ್ ಮಾಡಿದೆ. ಸ್ವಲ್ಪ ಗುಣಮುಖರಾದರು. ಅವರ ಸ್ಥಿತಿ ಸುಧಾರಿಸಿತು. ಬಳಿಕ ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದರು. ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ೫ ನಿಮಿಷ ವಿಳಂಬವಾಗಿದ್ದರೂ ನಾವು ಅವರನ್ನು ಕಳೆದುಕೊಳ್ಳುತ್ತಿದ್ದೇವು ಎಂದು ಹೇಳಿದರು.

RELATED ARTICLES
- Advertisment -
Google search engine

Most Popular