ಮಂಡ್ಯ: ಜಮೀನೊಂದರಲ್ಲಿ ಮಹಿಳೆಯ ನಗ್ನ ಮೃತ ದೇಹ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು ಮಂಗಳೂರು ಹೆದ್ದಾರಿಯ ಪಕ್ಕದ ಹರ್ಷ ಹೋಟೆಲ್ ಪಕ್ಕದ ಪಾಳು ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ.
ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ತಿರುಮಲಪುರ ಗ್ರಾಮದ ಮುರುಗಮ್ಮ(29) ಮೃತ ಮಹಿಳೆ.

5-6 ದಿನಗಳ ಹಿಂದೆ ಬೋವಿ ಜನಾಂಗಕ್ಕೆ ಸೇರಿದ ಅವಿವಾಹಿತೆ ಮುರುಗಮ್ಮ ಮನೆಯಿಂದ ಹೊರ ಹೋಗಿದ್ದರು. ಇಂದು ಬೆತ್ತಲೆಯಾಗಿ ಮುರುಗಮ್ಮ ಶವ ಪತ್ತೆಯಾಗಿದ್ದು, ಪಾಳು ಜಮೀನಿನಲ್ಲಿ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.