ಮೈಸೂರು: ಮಹಿಳೆಯರು ಸರ್ಕಾರದ ಸವಲತ್ತುಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗುವುದರೊಂದಿಗೆ ಸ್ವಾವಲಂಬಿಗಳಾಗಿ ಬದುಕುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಕರೆ ನೀಡಿದರು.
ಜ್ಞಾನ ಜ್ಯೋತಿ ಸಂಸ್ಥೆವತಿಯಿಂದ ಅಶೋಕಪುರಂನ ನಗರ ಜೀವನೋಪಾಯ ಕೇಂದ್ರ (ಪಶ್ಚಿಮ)ದಲ್ಲಿ ನಡೆದ ಸಮಾರಂಭ ವಿವಿಧ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು ಹೆಣ್ಣೋಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬಂತೆ ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡಿ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ತಾಯಿಯೇ ಮಕ್ಕಳಿಗೆ ಮೊದಲಗುರು. ನಾನು ಚಿಕ್ಕಂದಿನಲ್ಲೇ ನನ್ನ ತಂದೆಯನ್ನು ಕಳೆದುಕೊಂಡೆ. ನನ್ನ ತಾಯಿ ನನ್ನನ್ನು ಓದಿಸಿ ನಿಮಮ್ ಮುಂದೆ ನಿಲ್ಲಲು ಕಾರಣರಾಗಿದ್ದಾರೆ. ಆದ್ದರಿಂದ ದೇಶದಲ್ಲಿ ಹೆಣ್ಣು ಮಕ್ಕಳು ಭ್ರೂಣಹತ್ಯೆ ವಿರುದ್ದಮಹಿಳೆಯರು ಹೋರಾಡಬೇಕು. ಮಹಿಳೆಯರ ಮೇಲೆ ದೌರ್ಜನ್ಯ ಶೋಷಣೆ ನಿಲ್ಲಬೇಕು ಮಹಿಳೆಯರು ಪತ್ರಿಕೆಗಳನ್ನು ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಂಡು ಜಾಗೃತರಾಗಬೇಕು. ನಿಮ್ಮ ಮಕ್ಕಳನ್ನು ಐ.ಎ.ಎಸ್ , ಕೆ.ಎ.ಎಸ್. ಮಾಡಿಸಿ ಅಧಿಕಾರಿಗಳಾನ್ನಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ತನ್ನಿರಿ ಎಂದರು.
ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಮಾತನಾಡಿ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದರೂ ನಾವು ಅಂದುಕೊಂಡಂತೆ ದೇಶ ಅಭಿವೃದ್ಧಿಯಾಗಿಲ್ಲ ಕೇಂದ್ರ ಸರ್ಕಾರ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ತರಬೇತಿಗಳನ್ನು ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕಿ ಎಂದರು.
ಸಮಾರಂಭದಲ್ಲಿ ನಗರಪಾಲಿಕೆ ವಲಯದ ಆಯುಕ್ತರಾದ ಹೆಚ್. ನಾಗರಾಜು ನಗರಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ, ಜ್ಞಾನಜ್ಯೋತಿ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಎಸ್. ಹೇಮಾವೆಇ ಹಾಜರಿದ್ದರು.