ತಾಂಡವಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಅಕ್ರಮ, ತಪ್ಪು ಮಾಡಿಲ್ಲ ಅವರ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಅವರ ಮೇಲೆ ವಿನಾಕಾರಣ ಮೂಡ ಹಗರಣ ಎಂದು ಹೇಳಿ ಅವರ ಮೇಲೆ ಕೇಸು ಹಾಕಿ ತನಿಖೆ ಮಾಡಿಸಲು ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಪಾಲರ ಮೂಲಕ ರಾಜಕೀಯ ಕುತಂತ್ರ ಹುನ್ನಾರ ನಡೆಸುತ್ತಿದೆ ಎಂದು ವರುಣ ಕ್ಷೇತ್ರದ ಮಹಿಳೆಯರು ರಾಜ್ಯಪಾಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಕೆಎಸ್ ರವಿ ರವರ ನೇತೃತ್ವದಲ್ಲಿ ಮೈಸೂರು ನಂಜನಗೂಡು ಊಟಿ ರಸ್ತೆ ಬಸವನಪುರ ಗ್ರಾಮದ ಬಳಿ ಇರುವ ದೇವರಾಜ್ ಅರಸು ಸೇತುವೆ ಬಳಿ ಹಮ್ಮಿಕೊಂಡಿದ್ದ ರಕ್ಷ ತಡೆ ಚಳುವಳಿ ಮತ್ತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಅವರು ಮೋಸಗಾರರಲ್ಲ ಅವರು ಸದಾ ಬಡವರ ಬಗ್ಗೆ ಚಿಂತಿಸುವ ನಾಯಕ. ಅಂಥವರ ಮೇಲೆ ಸುಳ್ಳು ಆರೋಪ ಸುಳ್ಳು ಹಗರಣಗಳನ್ನು ಅವರ ಮೇಲೆ ಏರಿ ಅವರ ಶಕ್ತಿಯನ್ನು ರಾಜಕೀಯವಾಗಿ ಕುಂದಿಸಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯಪಾಲರ ಮೂಲಕ ಹುನ್ನಾರ ನಡೆಸುತ್ತಿದ್ದಾರೆ ಎಂದು ರಾಜ್ಯಪಾಲರ ನಡೆಯನ್ನು ಖಂಡಿಸಿ ಮಹಿಳೆಯರು ಹಾಗೂ ಗ್ರಾಮಸ್ಥರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿಯವರು ರಾಜ್ಯಪಾಲರ ನಡೆ ಕಾನೂನು ಬಾಹಿರ ಹಾಗೂ ಸಂವಿಧಾನ ವಿರುದ್ಧವಾಗಿದೆ. ರಾಜ್ಯಪಾಲರು ರಾಜ್ಯಪಾಲರಾಗಿ ಕೆಲಸ ನಿರ್ವಹಿಸದೆ ಕೇಂದ್ರ ಬಿಜೆಪಿ ಸರ್ಕಾರದ ಕೈ ಬೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಕೆಎಸ್ ರವಿ ಮಾತನಾಡಿ ಈ ಹೋರಾಟವು ಇಷ್ಟಕ್ಕೆ ನಿಲ್ಲುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನ್ಯಾಯ ಸಿಗುವ ತನಕ ಹೋರಾಟ ಮಾಡುತ್ತೇವೆ ಈ ಹೋರಾಟವನ್ನು ಗ್ರಾಮ ಪಂಚಾಯತಿಯ ಮಟ್ಟದಲ್ಲಿ ಗ್ರಾಮಸ್ಥರು ಹೋರಾಟವನ್ನು ಹಮ್ಮಿಕೊಂಡು ಕೇಂದ್ರ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ದಲಿತ ಮುಖಂಡ ಹೆಜ್ಜಿಗೆ ಆರ್ ಇಂದ್ರ ಬಾಬು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಕಾಂಗ್ರೆಸ್ ಪಕ್ಷದ ಓಬಿಸಿ ಘಟಕದ ಗಿರೀಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ದಯಾನಂದಮೂರ್ತಿ, ಎಚ್ಎಸ್ ಗಿರೀಶ್ಎಂ, ದಕ್ಷಿಣ ಮೂರ್ತಿ, ಮುಖಂಡರಾದ ಕೆ ಸಿದ್ದು ಗ್ರಾಮ ಪಂಚಾಯತಿಯ ಸದಸ್ಯರಾದ ನಂಜಯ್ಯ, ಶೃತಿ ಬೀರಯ್ಯ, ಜೆ ಆನಂದ್ ,ಗಾಯತ್ರಿ, ಮಹಾದೇವ ರವಿ ತೊರೆಮಾವು, ಗಿರೀಶ್ ಎನ್ ಚಂದ್ರು, ಮರಳೂರು ದೊರೆಸ್ವಾಮಿ, ಹುಳಿಮಾವು ಪರಶಿವಮೂರ್ತಿ ಹಾಗೂ ಗ್ರಾಮದ ಸಂಗೊಳ್ಳಿ ರಾಯಣ್ಣ ಯುಗ ಸಂಘದ ಸದಸ್ಯರು, ರೈತ ಸಂಘದ ಮುಖಂಡರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.