ಮೈಸೂರು: ಮಹಿಳೆ ತನ್ನ ಆರೋಗ್ಯದ ಕಡೆ ಗಮನ ಕೊಡಬೇಕು. ಮಹಿಳೆಯ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಕುಟುಂಬದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಕಾವೇರಿ ಆಸ್ಪತ್ರೆಯ ಪ್ರಸತ್ತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸರಳ ಚಂದ್ರಶೇಖರ್ ತಿಳಿಸಿದರು.
ಶುಕ್ರವಾರ ನೇಗಿಲ ಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಮಹಿಳಾದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯ ಜವಾಬ್ದಾರಿಯ ಸಂದರ್ಭದಲ್ಲಿ ಆರೋಗ್ಯವನ್ನು ಮರೆಯಬಾರದು. ಉತ್ತಮ ಆರೋಗ್ಯ ಕಾಪಾಡಿಕೊಂಡರೆ ಕುಟುಂಬ ಆರೋಗ್ಯದಿಂದ ಇರುತ್ತೆ. ಸಮಾಜ, ದೇಶ ಆರೋಗ್ಯದಿಂದ ಇರುತ್ತದೆ. ಆಗ ತೊಟ್ಟಿಲು ತೂಗಬಲ್ಲ ಕೈಗಳು ಜಗತ್ತನ್ನೇ ತೂಗಬಲ್ಲವಾಗುತ್ತವೆ ಎಂದರು.
ಕಾಲ ಮುಂದುವರಿದರೂ ಇಂದಿಗೂ ಮಹಿಳೆ ಶೋಷಣೆಗೆ ಒಳಗಾಗುತ್ತಿರುವುದು ಬೇಸರದ ಸಂಗತಿ . ಶಿಕ್ಷಣದ ಕೊರತೆಯಿಂದಾಗ ಶೋಷಣೆಗೆ ಒಳಗಾಗುತ್ತಿದ್ದಾರೆ. ಮಹಿಳೆ ಸೂಕ್ತ ಶಿಕ್ಷಣ ಪಡೆಯಬೇಕು ಅಲ್ಲದೆ ಸರ್ಕಾರಗಳು ಸ್ತ್ರೀಯರ ಏಳ್ಗೆಗೆ ಶ್ರಮಿಸುತ್ತಿದ್ದು ಅಂಥ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಕಷ್ಟ ಕಾಲದ ಆಪತ್ತಿಗಾಗಿ ಹೂಡಿಕೆ ಯಂತ ಪ್ರಕ್ರಿಯೆಯಲ್ಲೂ ತೊಡಗಬೇಕು. ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಆಸ್ತಿ ಮಾಡುವುದರ ಬದಲಿಗೆ ಅವರಿಗೆ ಶಿಕ್ಷಣ ನೀಡಿದರೆ ಅದೇ ಒಂದು ದೊಡ್ಡ ಹೂಡಿಕೆ ಯಾಗುತ್ತದೆ ಎಂದರು.
ಕೆ.ಎಸ್.ಓ.ಯು ಕಾನೂನು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜಾನ್ಹವಿ ಸಲಹೆ ಮಾತನಾಡಿ, ಭಾರತದಲ್ಲಿ ವಿವಾಹ ವಿಚ್ಚೇದನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪತಿ ಪತ್ನಿಯರ ನಡುವೆ ತನ್ನದೆ ಸರಿ ಎನ್ನುವ ಮನೋಭಾವನೆ ಇದಕ್ಕೆ ಕಾರಣವಾಗಿದೆ. ಕುಟುಂಬದಲ್ಲಿ ಯಾರಾದರು ಒಬ್ಬರೂ ಸೋಲುವುದನ್ನು ಕಲಿಯಬೇಕು. ಸೋತರೆ ಮಾತ್ರ ಸಂಬಂಧ ಉಳಿಯುತ್ತದೆ. ಒಮ್ಮೆ ಸೋತು ಜೀವನವನ್ನು ಗೆಲುವು ಎನ್ನಬಹುದು ಎಂದರು.
ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಗೌರವಿಸಲಾಯಿತು. ಮೈ.ವಿ.ವಿ ಸ್ಕೂಲ್ ಆಫ್ ಪ್ಲಾನಿಂಗ್ ಮತ್ತು ಆರ್ಕಿಟೆಕ್ಚರ್ ನ ಸಹಾಯಕ ಪ್ರಾಧ್ಯಾಪಕಿ ಮೈಸೂರು ಡಾ.ಎಸ್.ಯಶಸ್ವಿನಿ, ಬಿಕೆಜಿ ಆಸ್ಪತ್ರೆ ಗೈನಕಾಲೆಜಿಕಲ್ ಡಾ.ಡಿ.ಆರ್.ರಮ್ಯ, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಿ.ಸುಚೇತನ, ಡೆಕ್ಕನ್ ಹೆರಾಲ್ಡ್ ಹಿರಿಯ ವರದಿಗಾರ್ತಿ ಪಿ.ಶಿಲ್ಪ, ವೈದ್ಯೆ ಡಾ.ಎಚ್.ಸಿ.ಶೈಲಜಾ ರಾಣಿ ಮತ್ತು ಕರ್ನಾಟಕ ಕ್ರಿಕೆಟ್ ಮಹಿಳಾ ತಂಡದ ಮಾಜಿ ನಾಯಕಿ ರಕ್ಷಿತಾ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಗಿಯಿಂದ ಮಾಡಿದ ಅಡುಗೆಗಳ ಸ್ಪರ್ಧೆಯಲ್ಲಿ ಮಮತಾ ಪ್ರಿಯಾ ಶ್ರೀನಿವಾಸ್ ದ್ವಿತೀಯಾ, ಸುಧಾ ಶ್ರೀನಿವಾಸ್ ತೃತೀಯ ಬಹುಮಾನ ಪಡೆದರು. ತೋರಣ ಕಟ್ಟುವ ಸ್ಪರ್ಧೆಯಲ್ಲಿ ಶ್ವೇತಾ ಪ್ರಥಮ, ಸುಶೀಲ ದ್ವೀತಿಯಾ ಮತ್ತು ರೇಣುಕಾ ತೃತೀಯಬಹುಮಾನ ಪಡೆದರು.
ಅ ಆ ಇ ಈ ವೇಗವಾಗಿ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸೌಮ್ಯಶ್ರೀ, ದ್ವಿತೀಯ ಬಹುಮಾನವನ್ನು ಪ್ರಭಾಲೋಕೇಶ್ ಹಾಗೂ ತೃತೀಯ ಬಹುಮಾನವನ್ನು ಪ್ರಿಯ ಶ್ರೀನಿವಾಸ್ ಪಡೆದರು.
ನೇಗಿಲ ಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜೆ ಶೋಭಾ ರಮೇಶ್ ವಂದನಾರ್ಪಣೆಯನ್ನು ಮಾಡಿದರು.
ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಮೈಸೂರು ಅಧ್ಯಕ್ಷ ರವಿಕುಮಾರ್ , ನೇಗಿಲಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಕಾರ್ಯದರ್ಶಿ ಬಿ.ಪಿ.ಉಷಾರಾಣಿ, ಖಜಾಂಚಿ ಅನಿತಾ ಹೇಮಂತ್, ನಿರ್ದೇಶಕರಾದ ಅನಿತ ಮನೋಹರ್, ಬಿ.ಹೆಚ್.ಲತಾ, ಮಂಜುಳಾ ಭದ್ರೇಗೌಡ, ಲಲಿತಾ ರಂಗನಾಥ್, ಸುವರ್ಣರಾಜ್, ಎಂ ಪ್ರತಿಮಾ, ಗೌರಮ್ಮ, ಟಿ.ಎಂ.ಸವಿತಾ ಉಪಸ್ಥಿತರಿದ್ದರು.