ಮೈಸೂರು: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ ಸಿಗುತ್ತಿದೆ.. ಇದಕ್ಕಾಗಿ ಸಕಲ ಸಿದ್ದತೆಯನ್ನ ಮಾಡಿಕೊಳ್ಳಲಾಗಿದೆ. ಇನ್ನು ನೂರಾರು ಬಸ್ಗಳಲ್ಲಿ ಗೃಹ ಲಕ್ಷ್ಮೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಮಹಾರಾಜ ಕಾಲೇಜಿನ ಒಳಗೂ ಹೊರಗೂ ಹೌಸ್ ಫುಲ್ ಆಗಿದ್ದು, ಮಹಿಳೆಯರು ರಸ್ತೆಗಳಲ್ಲೇ ಕುಳಿತಿದ್ದಾರೆ.

ಸಾಂಸ್ಕೃತಿಕ ನಗರಿಯಲ್ಲಿ ಗೃಹಲಕ್ಷ್ಮಿಯರ ಕಲರವ ಕಣ್ತುಂಬಿಕೊಳ್ಳುವಂತಾಗಿದೆ. ಎಲ್ಲೆಲ್ಲೂ ಕಾಣ ಸಿಗುತ್ತಿರುವ ಮಹಿಳೆಯರ ದಂಡು ಮೈದಾನದ ಸುತ್ತಮುತ್ತ ರಸ್ತೆಗಳಲ್ಲೇ ಕುಳಿತು ಕಾರ್ಯಕ್ರಮ ಅಲಿಸುತ್ತಿದ್ದಾರೆ.
ಮಹಾರಾಜ ಕಾಲೇಜಿನ ವೇದಿಕೆ ಮಹಿಳೆಯರಿಂದ ಹೌಸ್ ಫುಲ್ ಆಗಿದ್ಷು, ಕಾಲಿಡಲಾಗದಷ್ಟು ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ.