Saturday, April 12, 2025
Google search engine

Homeಕ್ರೀಡೆಏಷ್ಯಾ ಕಪ್​ ಟೂರ್ನಿ: ಫೈನಲ್​ ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ..!

ಏಷ್ಯಾ ಕಪ್​ ಟೂರ್ನಿ: ಫೈನಲ್​ ಗೆ ಎಂಟ್ರಿ ಕೊಟ್ಟ ಟೀಮ್ ಇಂಡಿಯಾ..!

ಹಾಂಗ್​ ಕಾಂಗ್ ​ನಲ್ಲಿ ನಡೆಯುತ್ತಿರುವ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್​ ಟೂರ್ನಿಯಲ್ಲಿ ಟೀಮ್ ಇಂಡಿಯಾ ಎ ತಂಡವು ಫೈನಲ್ ಗೆ ಪ್ರವೇಶಿಸಿದೆ. ಈ ಟೂರ್ನಿಯಲ್ಲಿ ಭಾರತ ತಂಡವು ಕೇವಲ ಒಂದು ಪಂದ್ಯವನ್ನು ಗೆದ್ದು ಪ್ರಶಸ್ತಿ ಸುತ್ತಿಗೆ ತಲುಪಿರುವುದು ವಿಶೇಷ.

ಅಂದರೆ ಭಾರತ ತಂಡವು ಲೀಗ್​ ಹಂತದಲ್ಲಿ ಹಾಂಗ್ ​ಕಾಂಗ್ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತ್ತು. ಇದಾದ ಬಳಿಕ ನೇಪಾಳ ಹಾಗೂ ಪಾಕಿಸ್ತಾನ್ ವಿರುದ್ಧದ ಪಂದ್ಯಗಳು ಮಳೆಗೆ ಆಹುತಿಯಾಗಿದೆ. ಇತ್ತ ಉತ್ತಮ ನೆಟ್ ರನ್​ ರೇಟ್ ಹೊಂದಿದ್ದರಿಂದ ಭಾರತ ತಂಡವು ಸೆಮಿ ಫೈನಲ್ ಪ್ರವೇಶಿಸಿತ್ತು.

ಅದರಂತೆ ಸೋಮವಾರ ಶ್ರೀಲಂಕಾ ವಿರುದ್ಧ ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯಕ್ಕೂ ವರುಣ ಅಡ್ಡಿಯಾಗಿದ್ದಾನೆ. ಇನ್ನು ಮೀಸಲು ದಿನದಾಟದಲ್ಲೂ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗಿಲ್ಲ. ಹೀಗಾಗಿ ಹೆಚ್ಚಿನ ರನ್ ರೇಟ್ ಹೊಂದಿದ್ದ ಭಾರತ ತಂಡವು ನೇರವಾಗಿ ಫೈನಲ್​ ಗೆ ಪ್ರವೇಶಿಸಿದೆ.

ಮತ್ತೊಂದೆಡೆ 2ನೇ ಸೆಮಿಫೈನಲ್ ನಲ್ಲಿ ಬಾಂಗ್ಲಾದೇಶ್ ಎ ಹಾಗೂ ಪಾಕಿಸ್ತಾನ್ ಎ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಜೂನ್ 21 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದೆ.

ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಚೊಚ್ಚಲ ಎಸಿಸಿ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಟೂರ್ನಿಯ ಒಟ್ಟು 8 ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಹೀಗಾಗಿ ಬುಧವಾರ ಫೈನಲ್ ಪಂದ್ಯ ನಡೆಯಲಿದೆಯಾ ಎಂಬುದೇ ಈಗ ದೊಡ್ಡ ಪ್ರಶ್ನೆ.

RELATED ARTICLES
- Advertisment -
Google search engine

Most Popular