Sunday, April 20, 2025
Google search engine

Homeಸ್ಥಳೀಯಮಹಿಳಾ ಸಬಲೀಕರಣ ಕಾನೂನಿಗಷ್ಟೇ ಸೀಮಿತ

ಮಹಿಳಾ ಸಬಲೀಕರಣ ಕಾನೂನಿಗಷ್ಟೇ ಸೀಮಿತ


ಮೈಸೂರು: ದೇಶದಲ್ಲಿ ಮಹಿಳಾ ಸಬಲೀಕರಣ ಕೇವಲ ಕಾನೂನಿಗಷ್ಟೇ ಸೀಮಿತವಾಗಿದೆಯೇ ಹೊರತು ಅವುಗಳ ಅನುಷ್ಠಾನದಲ್ಲಿ ಇಂದಿಗೂ ನೀರಿಕ್ಷಿತ ಗುರಿ ಸಾಧಿಸಲು ಸಾಧವಾಗಿಲ್ಲ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ವಿಷಾದ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಟರಾಜ ಭವನದಲ್ಲಿ ಆಯೋಜಿಸಿದ್ದ ಕಾಲೇಜುಗಳತ್ತ ಅಂಬೇಡ್ಕರ್ ಚಿಂತನೆಗಳ ವಿಸ್ತರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಶ್ಚಿಮಾತ್ಯ ದೇಶಗಳಲ್ಲಿ ಮಹಿಳೆಯರಿಗೆ ನೀಡಿರುವ ಪ್ರಾತಿನಿದ್ಯಕ್ಕೂ, ಪ್ರಪಂಚದಲ್ಲೇ ಬೃಹತ್ ಸಂವಿಧಾನ ಹೊಂದಿರುವ ಭಾರತದಲ್ಲಿ ನೀಡಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಂಬೇಡ್ಕರ್ ಮಹಿಳೆಯರಿಗೆ ಸಮಾಜದಲ್ಲಿ ಘನತೆಯ ಬದುಕು ಸಿಗಬೇಕು ಎಂಬ ಉದ್ದೇದಿಂದ ಮಹಿಳೆಯರ ಪರ ಕಾನೂನು ರೂಪಿಸಲು ಹಿಂದುಕೋಡ್ ಬಿಲ್ ಪ್ರಸ್ತಾಪಿಸಿದಾಗ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೂ ವಿರೋಧ ವ್ಯಕ್ತಪಡಿಸಿದರು. ಇದರಿಂದ ಬೇಸತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತೀವ್ರವಾಗಿ ಖಂಡಿಸಿದ್ದರು ಎಂದು ಹೇಳಿದರು.
ಅಂಬೇಡ್ಕರ್ ಕೇವಲ ನಿಮ್ನ ವರ್ಗಗಳಿಗೆ ತಮ್ಮ ಬದುಕನ್ನು ಸೀಮಿತಗೊಳಿಸಿಕೊಳ್ಳದೆ, ಮಹಿಳೆಯರು, ಹಿಂದುಳಿದ ಸಮುದಾಯಗಳು, ಕಾರ್ಮಿಕರು ಹೀಗೆ ಸಮಾಜದಲ್ಲಿ ತುಳಿತಕ್ಕೊಳಗಾದ ಎಲ್ಲಾ ಸಮುದಾಯಗಳ ಪರವಾಗಿ ಧನಿ ಎತ್ತಿದ್ದಾರೆ. ಆದರೆ, ಕೆಲವರು ಅವರನ್ನು ಕೇವಲ ಒಂದು ವರ್ಗಕ್ಕೆ ಸೀಮಿತಗೊಳಿಸುವ ಹುನ್ನಾರ ಹಿಂದಿನಿಂದಿಲೂ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಮಹಿಳಾ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ಸಾಧವಾಗದಿದ್ದರೂ ಕನಿಷ್ಟ ಶೇ.೨೫ ಕೆಲಸ ಮಾಡಲು ಮುಂದಾದರೆ, ಅದಕ್ಕೂ ಸಾಕಷ್ಟು ಪ್ರತಿರೋಧಗಳು ಕೇಳಿಬರುತ್ತವೆ. ಜಾತಿ ಕಾರಣಕ್ಕಾಗಿ ಮೈಸೂರಿನಂತಹ ನಗರದಲ್ಲೇ ಒಂದು ಮನೆ ಹುಡುಕಿಕೊಳ್ಳಲು ನನಗೆ ಒಂದು ವರ್ಷ ಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜ ನಮ್ಮ ಕೈಯಲ್ಲಿದೆ ಎಂದು ಹೇಳುತ್ತಿರುವವರಿಗೆ ಮಹಿಳೆಯರಿಗೆ ಆಸ್ತಿಯಲ್ಲಿ ಸಮಪಾಲು ಕೊಡಲು ಸಾಧವಾಗುತ್ತಿಲ್ಲ. ಹಳ್ಳಿಗಳಲ್ಲಿ ಇಂದಿಗೂ ಮಹಿಳೆಗೆ ಆಸ್ತಿಯಲ್ಲಿ ಸಮಾನ ಪಾಲು ನೀಡುತ್ತಿಲ್ಲ. ನಾವು, ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಅಧಯನ ಮಾಡಬೇಕಿದೆ. ಇಂತವರ ಆಲೋಚನೆಗಳು ಅನುಷ್ಠಾವಾಗುವಂತೆ ಜಾಗೃತಗೊಳ್ಳಬೇಕಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಧಯನ ಕೇಂದ್ರದ ನಿರ್ದೇಶಕ ಡಾ.ನರೇಂದ್ರ ಕುಮಾರ್ ಮಾತನಾಡಿ, ವಿಶ್ವಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಪ್ರಪಂಚದ ಅಧದಷ್ಟಿರುವ ಮಹಿಳೆಗೆ ಸೂಕ್ತ ಸ್ಥಾನಮಾನ ಸಿಗಬೇಕು ಎಂಬ ಉದ್ದೇಶದಿಂದ ಅವರು ಸಾಕಷ್ಟು ಹೋರಾಟ ಮಾಡಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ಇಂದಿಗೂ ನಿರ್ಲಕ್ಷ್ಯ ಮಾಡಲಾಗಿದೆ. ಸಾಮಾನ್ಯವಾಗಿ ಎಲ್ಲರೂ ತಮ್ಮ ಹೆಸರಿನ ಮುಂದೆ ತಂದೆ ಹೆಸರನ್ನೇ ಸೂಚಿಸುವ ಅಕ್ಷರ ಬಳಸುತ್ತಾರೆ ಹೊರತು ತಾಯಿಯ ಹೆಸರನ್ನು ಬಳಸುವುದಿಲ್ಲ. ಇದು ಬದಲಾಗಬೇಕು ತಂದೆ ತಾಯಿ ಇಬ್ಬರಿಗೂ ಸಮಾನ ಗೌರವ ಸಲ್ಲವಂತಾಗಬೇಕು ಎಂದು ಹೇಳಿದರು.
ಮಹಿಳೆಯರು ಅಬಲೆಯರು ಎಂದು ನಂಬಿಸಲಾಗಿದೆ. ಸಂಚಿ ಹೊನ್ನಮ್ಮರಂತಹ ಸಾಮಾನ್ಯ ಮಹಿಳೆಯೂ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಸಿಡಿದೆದ್ದರು. ಬುದ್ಧ ತಮ್ಮ ಸಂಘಕ್ಕೆ ಮಹಿಳೆಯರನ್ನು ಸೇರಿಸಿಕೊಂಡರು. ವಚನ ಚಳವಳಿಯಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದರು ಎಂದು ಹೇಳಿದರು.
ನಟರಾಜ ಪ್ರತಿಷ್ಠಾನದ ಅಧಕ್ಷ ಚಿದಾನಂದ ಮಹಾಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ, ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವನಂಜಪ್ಪ ಪ್ರೊ.ಜೆ.ಸೋಮಶೇಖರ್ ಇದ್ದರು.

RELATED ARTICLES
- Advertisment -
Google search engine

Most Popular