ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಷು ಮೀಸಲು ಕಲ್ಪಿಸುವ ಉದ್ದೇಶ ಒಳ್ಳೆಯದು. ಆದರೆ ಮಹಿಳಾ ಮೀಸಲು ವಿಧೇಯಕ ಕೇವಲ ಸುಧಾರಣೆಯಲ್ಲ ಆಡಳಿತ ವ್ಯವಸ್ಥೆಯ ಪುನಾರಚನೆಯ ದಾರಿ ಆಗಬೇಕು.
2023ರಲ್ಲಿ ಮೋದಿ ನೇತೃತ್ವದ ಸರ್ಕಾರ ಸಂಸತ್ ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಪಡೆದು ಅದನ್ನು ಈಗ ಇರುವ 543 ಕ್ಷೇತ್ರವನ್ನು ಶೇಕಡಾ 50% ಹೆಚ್ಚು ಮಾಡಿ 816ಕ್ಕೆ ಏರಿಸಿ ಅದರಲ್ಲಿ 33% ಮಹಿಳಾ ಮೀಸಲಾತಿ ನೀಡಲು ಕಾನೂನು ತಿದ್ದುಪಡಿ ತರುತ್ತಿರುವುದು ಮೋದಿ ನೇತೃತ್ವದ ಕೇಂದ್ರ ಸರಕಾರದ ನಡೆ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಹಳೆಯ 1971ರ ಅಥವಾ ಹೊಸ 2027ರ ಜನಸಂಖ್ಯೆ ಆಧಾರದಲ್ಲಿ ಇದನ್ನು ಯಾವುದರಲ್ಲಿ ಜಾರಿಗೆ ತರುವರು ಎಂದು ಜನತೆಗೆ ಬಹಿರಂಗಪಡಿಸಬೇಕು. ಈಗಷ್ಟೇ ಬಜೆಟ್ ಅಧಿವೇಶನ ಮುಗಿದು ಮತ್ತೆ ದಿಢೀರ್ ಆಗಿ ವಿಶೇಷ ಸಂಸತ್ ಅಧಿವೇಶನ ಕರೆದು ಇರುವ ಕೇಂದ್ರ ಸರ್ಕಾರದ ಆತುರದ ನಿರ್ಧಾರ ಸಂಶಯಕ್ಕೆ ಕಾರಣವಾಗಿದೆ.
ಮಹಿಳಾ ಸಬಲೀಕರಣ ಉದ್ದೇಶ ನೈಜವಾಗಿದ್ದರೆ ಈಗ ಇರುವ ಚೌಕಟ್ಟಿನೊಳಗೆ ಮಹಿಳಾ ಮೀಸಲು ಜಾರಿ ಮಾಡಬೇಕು.
ಪ್ರಸ್ತಾವಿತ ಕ್ಷೇತ್ರ ಪುನರ್ ವಿಂಗಡಣೆ ಪಾರದರ್ಶಕವಾಗಿ ನಡೆಯಬೇಕು. ಪುಟ್ಟ ಜಿಲ್ಲೆಯಾದ ಕೊಡಗು ಜನಸಂಖ್ಯೆ ಸ್ಪೋಟ ಆಗದಂತೆ ನೀತಿಯನ್ನು ಅಳವಡಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಪ್ರದೇಶಕ್ಕೆ ಅನ್ಯಾಯವಾಗದಂತೆ ನೋಡಬೇಕು.ಕೊಡಗು ಜಿಲ್ಲೆ ಬಹಳ ವರ್ಷಗಳಿಂದ ಸಂಸತ್ ಸದಸ್ಯತ್ವದಿಂದ ವಂಚಿತವಾಗಿದೆ , ಈಗ ಇರುವ ವಿಧಾನಸಭೆ ಕ್ಷೇತ್ರವನ್ನು ಎರಡರಿಂದ ಐದಕ್ಕೆ ಏರಿಸಬೇಕು.ಅದಕ್ಕೆ ಈ ಬಾರಿಯ ಕ್ಷೇತ್ರ ಪುನರ್ ವಿಂಗಡಣೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು.
ಈ ಹಿನ್ನೆಲೆಯಲ್ಲಿ, ಲೋಕಸಭೆ ಕ್ಷೇತ್ರಗಳನ್ನು ಹೆಚ್ಚಿಸದೇ ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂದು ಆಮ್ ಆದ್ಮಿ ಪಕ್ಷದ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.



