ಹುಣಸೂರು: ಮೇಘಾಲಯ ರಾಜ್ಯದಲ್ಲಿ ರಾಜಭವನಕ್ಕೆ ಸೀಮಿತವಾಗದೆ, ಅಲ್ಲಿನ ಜನರ ಸಮಸ್ಯೆಗಳನ್ನು ಖುದ್ದು ಆಲಿಸಿ, ಅವರ ನೋವು ನಲಿವಿಗೆ ಸ್ಪಂದಿಸುವೆ’ ಎಂದು ಮೇಘಾಲಯ ರಾಜ್ಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ತಿಳಿಸಿದರು.
ರಾಜ್ಯಪಾಲ ಹುದ್ದೆ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಹುಣಸೂರು ತಾಲೂಕಿಗೆ ಭೇಟಿ ನೀಡಿದ ಅವರು, ಕುರುಬ ಸಮಾಜದವರಿಂದ ನಾಗರಿಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ 40 ವರ್ಷದ ರಾಯಕೀಯ ಜೀವನದಲ್ಲಿ ನಮ್ಮ ಜಿಲ್ಲೆಯ ಆದಿವಾಸಿ ಜನರ ಬದುಕಿನ ಬಗ್ಗೆ ತಿಳಿದಿದ್ದೇನೆ. ಇವರುಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಯತ್ನಿಸುವೆ. ಮೇಘಾಲಯದಲ್ಲಿ ಶೇ.85-90 ರಷ್ಟು ಆದಿವಾಸಿಗಳಿರುವ ವಿಶಿಷ್ಟ ರಾಜ್ಯವಾಗಿದೆ.
ಅಲ್ಲಿನ ಇಡೀ ರಾಜ್ಯದಲ್ಲಿ ಒಬ್ಬ ಬಿಕ್ಷುಕ್ಷ ನಿಲ್ಲದ ರಾಜ್ಯವಾಗಿದೆ. ಅಲ್ಲಿ ನಮ್ಮಲ್ಲಿರುವ ಹಾಗೇ ಗಂಡನಮನೆಗೆ ಹೆಂಡತಿ ಬರುವ ಸಾಂಪ್ರದಾಯಿಕವಿಲ್ಲ. ಹೆಂಡತಿ ಮನೆಗೆ ಗಂಡ ಹೋಗುವ ಸಾಂಪ್ರದಾಯಕವಿದೆ. ಅಲ್ಲಿ ಮಹಿಳೆಯರು ದುಡಿಮೆಯಲ್ಲು ಮುಂದಿದ್ದಾರೆ. ನೈಸರ್ಗಿಕ ವಾಗಿ ಪರಿಶುದ್ದ ನೀರು, ಗಾಳಿ ಇದೆ. ಇಡೀ ಜಗತ್ತಿನಲ್ಲಿ ಹೆಸರುವಾಸಿಯಾಗಿರುವ ಆರ್ಯವೇಧ ಗಿಡ ಮೂಲಿಕೆಗಳಿಗೆ ಪ್ರಸಿದ್ದಿಯಾಗಿರುವ ರಾಜ್ಯವಾಗಿದೆ ಎಂದು ಮೇಘಾಲಯ ರಾಜ್ಯದ ಬಗ್ಗೆ ತಿಳಿಸಿ ಬಾಂಗ್ಲಾ ದೇಶಕ್ಕೆ ಹೊಂದಿಕೊಂಡಿರುವ ಮೇಘಾಲಯದ ಕೆಲವು ಗ್ರಾಮಗಳಲ್ಲಿ ವಲಸಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಅಲ್ಲಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವೆ’ ಪ್ರಧಾನಮಂತ್ರಿ ನರೇಂದ್ರ ಮೋದಿಜೀ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರ ಆಶಯದಂತೆ ಮೇಘಾಲಯ ರಾಜ್ಯದ ಪ್ರತಿ ಜನರ ಪ್ರೀತಿ ವಿಶ್ವಾಸ ಗಳಿಸಿ ಕೊಟ್ಟಿರುವ ಜವಾಬ್ದಾರಿಯನ್ನು ಸಂವಿಧಾನದಡಿಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಕಾರ್ಯದರ್ಶಿ ವಾಸೇಗೌಡ, ಎ.ಪಿ.ಸ್ವಾಮಿ, ಅಣ್ಣಯ್ಯನಾಯಕ, ಶಿಕ್ಷಕ ಜೆ ಮಾದೇವ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಮಂಜುನಾಥ್ ಜೆ, ನಗರಸಭಾ ಆಯುಕ್ತೆ ಮಾನಸ, ಕಾಂಗ್ರೇಸ್ ನಗರ ಅಧ್ಯಕ್ಷ ರಮೇಶ್, ಬಿಜೆಪಿ ಅಧ್ಯಕ್ಷ ಕಾಂತರಾಜು, ಜೆಡಿಎಸ್ ಅಧ್ಯಕ್ಷ ದೇವರಾಜ್ ಒಡೆಯರ್, ನಗರಸಭಾ ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಸ್ವಾಮಿಗೌಡ, ಹರೀಶ್, ಕನಕ ನೌಕರರಸಂಘದ ಅಧ್ಯಕ್ಷ ಕೆಂಚೇಗೌಡ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ನಾಮ ನಿರ್ಧೇಶನ ಸದಸ್ಯ ನೇರಳಕುಪ್ಪೆ ಮಹದೇವ್,ಜಿ.ಪಂ.ಮಾಜಿಸದಸ್ಯ ಜಾಬಗೆರೆ ರಮೇಶ್, ತಾ.ಪಂ.ಮಾಜಿ ಸದಸ್ಯ ಹುಂಡಿಮಾಳ ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಹಜರತ್ ಜಾನ್,
ತಾ. ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಚಂದ್ರೇಗೌಡ, ನರಸಿಂಹ, ವೆಂಕಟರಮಣ, , ಸುಂಡವಾಳು ಮಹದೇವ್, ಕಣಗಾಲ್ ರಾಮೇಗೌಡ, ಮಲ್ಲೇಶ್, ಸಣ್ಣೇಗೌಡ, ನಾಗಣ್ಣ, ಈಶ್ವರ್ ಸೇರಿದಂತೆ ಕುರುಬರ ಅಭಿವೃದ್ದಿ ಸಮಿತಿಯ ನಿರ್ಧೇಶಕರು ಹಾಗೂ ಇತರರು ಇದ್ದರು.