ಹಾಸನ : ಜಿಲ್ಲೆಯ ನಂದಗೋಡನಹಳ್ಳಿಯಲ್ಲಿ ತಾವು ಲೀಜ್ ಗೆ ಪಡೆದಿದ್ದ ಜಮೀನಿನಲ್ಲಿ 126 ಮರಗಳನ್ನು ಅಕ್ರಮವಾಗಿ ಕಡಿದು, ಸಾಗಾಣಿಕೆ ಮಾಡಿರುವ ಆರೋಪ ಎದುರಿಸುತ್ತಿರುವ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ತಮ್ಮ ವಿಕ್ರಂ ಸಿಂಹನನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಹಾಸನ ಜಿಲ್ಲೆಯಲ್ಲಿ ಮರಗಳನ್ನು ಅಕ್ರಮವಾಗಿ ಕಡಿದಿರುವ ಆರೋಪದ ಮೇರೆಗೆ ವಿಕ್ರಂ ಸಿಂಹ ವಿರುದ್ಧ ಣ್ಯಾಧಿಕಾರಿಗಳು ವಾರದ ಹಿಂದಷ್ಟೇ ಎಫ್ಐಆರ್ ದಾಖಲಿಸಿದ್ದರು. ಈಗ ಅವರನ್ನು ಬಂಧಿಸಿದ್ದಾರೆ. ಹಲವು ದಿನಗಳಿಂದ ಅಧಿಕಾರಿಗಳ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ವಿಕ್ರಂ ಸಿಂಹ ಬೆಂಗಳೂರಿನಲ್ಲೇ ಇರುವುದನ್ನು ಮಾಹಿತಿ ಪಡೆದ ಅಧಿಕಾರಿಗಳು ಆರೋಪಿ ವಿಕ್ರ ಸಿಂಹನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಜಾರುಬಂಡೆ ಅರಣ್ಯ ಕೇಂದ್ರದಲ್ಲಿ ಕರೆದೊಯ್ಯಲಾಗಿತ್ತು. ಆನಂತರ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.