ಮೈಸೂರು: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಅದನ್ನು ತಲುಪಲು ಶ್ರಮಿಸಬೇಕು ಎಂದು ಮೈಸೂರು ವಿವಿ ತತ್ವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎಸ್.ಶೇಷಗಿರಿರಾವ್ ಸಲಹೆ ನೀಡಿದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸದ್ವಿದ್ಯಾ ಶತ್ತೋತ್ತರ, ಸುವರ್ಣ, ರಜತ ಮಹೋತ್ಸವ ವರ್ಷ ಅಂಗವಾಗಿ ಸದ್ವಿದ್ಯಾ ಪ್ರೌಢ ಶಾಲೆಯಲ್ಲಿ ಆಯೋಜಿಸಿರುವ ನಗರ ಮಟ್ಟದ ಅಂತರ ಪ್ರೌಢಶಾಲಾ ನಾನಾ ಸ್ಪರ್ಧೆಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು
ವಿದ್ಯಾರ್ಥಿಗಳು ಗುರಿ ಮುಟ್ಟಲು ಸೂಕ್ತ ದಾರಿ ಆಯ್ಕೆ ಮಾಡಿಕೊಳ್ಳಬೇಕು. ಸಮಯ ಪ್ರಜ್ಞೆ ಬೆಳೆಸಿಕೊಳ್ಳಬೇಕು, ಜೀವನದಲ್ಲಿ ಗುರಿ ಇಟ್ಟುಕೊಂಡು ಶಿPಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು. ಸದ್ವಿದ್ಯಾ ಸಂಸ್ಥೆಗೆ ಸುದೀರ್ಘ ಇತಿಹಾಸ ಇದೆ. ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿವೆ ಎಂದರು.
ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಗೌರವ ಸಹ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ ಮಾತನಾಡಿ, ಇಂತಹ ಸ್ಪರ್ಧೆಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಇವು ಜೀವನದ ಸ್ಪರ್ಧೆಗೂ ಸಹಕಾರಿಯಾಗಲಿವೆ. ಹಾಗಾಗಿ ಬಹುಮಾನ ಗೆಲ್ಲುವುದಕಿಂತಲೂ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಎನ್ನುವುದನ್ನು ವಿದ್ಯಾರ್ಥಿಗಳು ತಿಳಿಯಬೇಕು ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸವಾಲುಗಳನ್ನು ಎದುರಿಸಿ ಮುನ್ನುಗ್ಗಬೇಕು. ಉನ್ನತ ಹುz ಅಲಂಕರಿಸುವ ಗುರಿ ಹೊಂದಬೇಕು. ಗುರು-ಹಿರಿಯರನ್ನು ಗೌರವ ಭಾವದಿಂದ ಕಾಣಬೇಕು. ಸ್ಪರ್ಧೆಯಲ್ಲಿ ಭಾಗಿಯಾಗಿರು ವಿದ್ಯಾರ್ಥಿಗಳ ಮೇಲೆ ಕೃಷ್ಣನ ಹಾಗೂ ದಾಸರ ಅನುಗ್ರಹ ಇರಲಿ ಎಂದು ಆಶಿಸಿದರು. ಮುಖ್ಯ ಶಿಕ್ಷಕ ರಾಮಚಂದ್ರಭಟ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆಡಾ.ನಳನಿ ಚಂದರ್ ಇತರರಿದ್ದರು.
ದಿ.ನಾಗೇಶ್ ಸ್ಮಾರಕ ೪೩ನೇ ವರ್ಷದ ಆಶುಭಾಷಣ ಸ್ಪರ್ಧೆ, ದಿ.ಶಾಂತಮ್ಮ ಸ್ಮಾರಕ ೨೩ನೇ ವರ್ಷದ ಹರಿದಾಸ ದೇವರನಾಮ ಸ್ಪರ್ಧೆ, ೨೩ನೇ ವರ್ಷದ ತ್ಯಾಗರಾಜರ ಕೃತಿಗಳ ಗಾಯನ ಸ್ಪರ್ಧೆ, ೨೩ನೇ ವರ್ಷದ ಪುರಂದರದಾಸರ ದೇವರನಾಮ ಗಾಯನ ಸ್ಪರ್ಧೆ ಹಾಗೂ ಅಂತರ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ೧೪ನೇ ವರ್ಷದ ಶ್ರೀಮದ್ಭಗವದ್ಗೀತಾ ಕಂಠಪಾಠ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳ ೨೮೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಸ್ಪರ್ಧೆ ಆಗಸ್ಟ್ ೧೨ ರವರೆಗೆ ನಡೆಯಲಿದೆ