ಮೈಸೂರು: ಆಧುನಿಕ ತಂತ್ರeನ ಬಳಸಿಕೊಂಡು ವೈದ್ಯಕೀಯ, ತಂತ್ರeನ, ಪದವಿ, ಎಲ್‌ಎಲ್‌ಬಿ ಮುಂತಾದ ಕೋರ್ಸ್‌ಗಳನ್ನು ಭಾರತೀಯ ಭಾಷೆಗಳಲ್ಲಿ ನೀಡಬೇಕು ಎಂದು ಭಾರತ ಸರ್ಕಾರದ ಶಿPಣ ಸಚಿವಾಲಯದ ಭಾರತೀಯ ಭಾಷೆಗಳ ಪ್ರಚಾರದ ಉನ್ನತ ಅಧಿಕಾರ ಸಮಿತಿ ಮುಖ್ಯಸ್ಥ ಪದ್ಮಶ್ರೀ ಚಾಮು ಕೃಷ್ಣಶಾಸ್ತ್ರಿ ಕಿವಿಮಾತು ಹೇಳಿದರು.
ಸೋಮವಾರ ಆಯೋಜಿಸಿದ್ದ ನಗರದ ಭಾರತೀಯ ಭಾಷಾ ಸಂಸ್ಥಾನದ ೫೫ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಬಿಕಾಂ, ಬಿಎ, ಬಿಎಸ್ಸಿ, ಎಲ್‌ಎಲ್‌ಬಿ, ವೈದ್ಯಕೀಯ ಮತ್ತು ತಂತ್ರeನ ಮುಂತಾದ ವಿಷಯಗಳನ್ನು ಆಧುನಿಕ ತಂತ್ರeನ ಬಳಸಿಕೊಂಡು ಅಭಿವೃದ್ಧಿಪಡಿಸಬೇಕು. ಸಿಐಐಎಲ್‌ನಲ್ಲಿ ಹಿಂದಿನ ಪದ್ಧತಿಯನ್ನು ಬಿಟ್ಟು, ಮುಂದಿನ ಐದು-ಹತ್ತು ವರ್ಷದ ದೂರ ದೃಷ್ಟಿಯೊಂದಿಗೆ ಕೆಲಸ ಮಾಡಬೇಕು. ಭಾರತೀಯ ಭಾಷೆಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಭಾಷೆಗಳು ಜನರನ್ನು ಒಗ್ಗೂಡಿಸಬೇಕು, ಬೇರ್ಪಡಿಸಬಾರದು. ಭಾರತದಲ್ಲಿ ಪ್ರಸ್ತುತ ದಿನಗಳಲ್ಲಿ ೧೯ ಸಾವಿರ ಭಾಷೆಗಳಿವೆ. ಆ ಎಲ್ಲಾ ಭಾಷೆಗಳನ್ನು ಉಳಿಸುವ ಕೆಲಸ ಮಾಡಬೇಕು. ದೇಶದಲ್ಲಿ ಸುಮಾರು ೯೦ ಲPದಿಂದ ೧ ಕೋಟಿ ಶಾಲಾ ಶಿPಕರು ಇದ್ದಾರೆ. ಈ ಪೈಕಿ ಭಾಷಾ ಶಿPಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶೇ.೩೦ರಷ್ಟು ಶಾಲಾ ಶಿPಣ, ಶೇ.೧೮ರಷ್ಟು ಉನ್ನತ ಶಿPಣದಲ್ಲಿದ್ದಾರೆ. ಈ ಎಲ್ಲಾ ಭಾಷಾ ಶಿPಕರು ಕೇವಲ ಒಂದೇ ಭಾಷೆಯಲ್ಲಿ ಪರಿಣತಿ ಹೊಂದಿರುತ್ತಾರೆ. ಅವರು ಮತ್ತೊಂದು ಭಾಷೆ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬ್ರಿಟೀಷರು ಬರುವ ಮುನ್ನ ಭಾಷೆ ವಿಷಯದಲ್ಲಿ ವಿಂಗಡಣೆ ಆಗಿರಲಿಲ್ಲ. ಕನ್ಯಾಕುಮಾರಿ ಮತ್ತು ಕಾಶ್ಮೀರದವರೆಗೆ ಯಾವಾಗಲೂ ಭಾಷೆಯ ಸಮಸ್ಯೆ ಎದುರಾಗಿರಲಿಲ್ಲ. ಒಂದು ಭಾಷೆಯವರು, ಮತ್ತೊಂದು ಭಾಷೆ ಗೌರವಿಸುತ್ತಿದ್ದರು. ಬ್ರಿಟೀಷರು ಬಂದ ಮೇಲೆ ದ್ರಾವಿಡ, ಆರ್ಯರು ಎಂದು ವಿಭಾಗಿಸಲಾಯಿತು ಎಂದು ತಿಳಿಸಿದರು. ೨೦೨೦-೨೧ ಮತ್ತು ೨೦೨೧-೨೨ರಲ್ಲಿ ಮಾತೃಭಾಷೆಯಲ್ಲಿ ಶಿPಣ ಪಡೆಯುತ್ತಿದ್ದ ಸುಮರು ೨.೬೫ ಕೋಟಿ ವಿದ್ಯಾರ್ಥಿಗಳು ಈಗ ಇಂಗ್ಲಿಷ್ ಮಾಧ್ಯಮಕ್ಕೆ ಹೋಗಿದ್ದಾರೆ. ತಮಿಳುನಾಡಿನಲ್ಲಿ ೨೦೧೧ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.೭೪ ವಿದ್ಯಾರ್ಥಿಗಳು ಮಾತೃ ಭಾಷೆ ವ್ಯಾಸಂಗ ಮಾಡಿದ್ದರೆ, ೨೦೨೧ಕ್ಕೆ ಆ ಸಂಖ್ಯೆ ಶೇ.೫೫ಕ್ಕೆ ಇಳಿಕೆ ಆಗಿತ್ತು. ಈಗ ಇನ್ನೂ ಕಡಿಮೆಯಾಗಿದೆ. ಇದು ಕೇವಲ ತಮಿಳುನಾಡಿನ ಸಮಸ್ಯೆ ಮಾತ್ರವಲ್ಲ. ಎಲ್ಲಾ ಭಾಷೆಯ ಸ್ಥಿತಿಯೂ ಹೀಗೆಯೇ ಇದೆ ಎಂದರು.
ಭಾತೀಯ ಭಾಷೆಗಳ ಮುಂದೆ ದೊಡ್ಡ ಸವಾಲಿದೆ. ಮಾಧ್ಯಮ ಬಹಳ ಮುಖ್ಯವಾಗುತ್ತದೆ. ಮಾತೃ ಭಾಷೆಯಲ್ಲಿ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಹೇಳಿ ಕೊಡುವ ಪ್ರಯತ್ನ ಮಾಡಬೇಕು. ಭಾಷಾ ಶಿPಕರಿಗೆ ತರಬೇತಿ ನೀಡಲು ನಾವು ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಐಐಎಲ್ ನಿರ್ದೇಶಕ ಪ್ರೊ.ಶೈಲೇಂದ್ರಮೋಹನ್ ಅಧ್ಯPತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಅಜಿತ್ ಕೆ.ಮೊಹಂತಿ, ಪ್ರೊ.ಜಿ.ರಾಜಗೋಪಾಲ್, ಡಾ.ನಾರಾಯಣಕುಮಾರ್ ಚೌಧರಿ ಮೊದಲಾದವರು ಇದ್ದರು.