- ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ 2024ರ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಶಾಸಕರಾದ ಶ್ರೀಯುತ ಅನಿಲ್ ಚಿಕ್ಕಮಾದು ಅವರು ವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಉದ್ಘಾಟಿಸಿ ಮಾತನಾಡಿ, ವಿಶ್ವ ಏಡ್ಸ್ ದಿನವನ್ನು ಡಿಸೆಂಬರ್ 01 ರಂದು ಪ್ರತಿವರ್ಷ ಆಚರಣೆ ಮಾಡುತ್ತಾ ಬಂದಿರುತ್ತೇವೆ ಇದರ ಬಗ್ಗೆ ಹಾಗೂ HIV ಸೋಂಕು ತಡೆಗಟ್ಟಲು ಜನಸಾಮಾನ್ಯರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿಮೂಡಿಸುವುದಕ್ಕಾಗಿ ಹಾಗೂ ಇದನ್ನು ಎದುರಿಸಲು ನಮ್ಮ ಮುಂದಿರುವ ಸವಾಲುಗಳ ಬಗ್ಗೆ ಚಿಂತಿಸುವ ದಿನ ಇದಾಗಿದೆ. HIV ಏಡ್ಸ್ ನಿಯಂತ್ರಣ ಕುರಿತು ಸರ್ಕಾರಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕೈಗೊಂಡ ಕ್ರಮಗಳ ಬಗ್ಗೆ ಜನರಿಗೆ ತಿಳಿಸುವ ಸದಾವಕಾಶ ವಾಗಿರುತ್ತದೆ, ಇಲ್ಲಿರವರೆಗೂ ಈ ಸೋಂಕು ತಡೆಗಟ್ಟಲು, ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು, ಸಾರ್ವಜನಿಕರಿಗೆ ತಿಳಿಸುವ ದಿನವಾಗಿರುತ್ತದೆ . ಆದ್ದರಿಂದ ತಾಲ್ಲೂಕಿನಲ್ಲಿ ಅತಿಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ಮಾಡಲು ತಿಳಿಸಿದರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ ರವಿಕುಮಾರ್ ಮಾತನಾಡಿ, ಈ ವರ್ಷದ ಘೋಷಣೆ ” ಹಕ್ಕುಗಳನ್ನು ಪಡೆಯಲು ಸರಿಯಾಗಿ ಮಾರ್ಗ ಅನುಸರಿಸೋಣ,ನನ್ನ ಆರೋಗ್ಯ ನನ್ನ ಹಕ್ಕು” ವಿಶ್ವ ಏಡ್ಸ್ ದಿನಾಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು 1988 ರಿಂದ ಡಿಸೆಂಬರ್ 01 ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸುತ್ತಾ ಬಂದಿದೆ ಹಾಗೂ 2015 ರವರೆಗೆ HIV/ಏಡ್ಸ್ ಸೋಂಕನ್ನು ಸೊನ್ನೆಗೆ ತರಲು, ಪ್ರತಿವರ್ಷವೂ ಒಂದು ಘೋಷವಾಕ್ಯವನ್ನಿಟ್ಟುಕೊಂಡು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
1981ರಲ್ಲಿ ಮೊಟ್ಟಮೊದಲ ಇದನ್ನು ಪತ್ತೆ ಹಚ್ಚಲಾಯಿತು, 1983 ರಲ್ಲಿ ಮೊಟ್ಟಮೊದಲು HIV ಯನ್ನು ಲುಕ್ ಮಾಂಟೆಗ್ನಿಯರ್ ಮತ್ತು ರಾಬರ್ಟ್‌ಗಾಲೋ ಪತ್ತೆ ಹಚ್ಚಿದರು, 1986 ರಲ್ಲಿ ಮೊಟ್ಟಮೊದಲು HIV ಸೋಂಕುಗಳ ವ್ಯಕ್ತಿಯನ್ನು ಚೆನ್ನೈನ ವೇಲ್ಲೂರು ಮತ್ತು ಮುಂಬೈಯಲ್ಲಿ ಪತ್ತೆಹಚ್ಚಲಾಯಿತು. 1987ರಲ್ಲಿ ಮೊಟ್ಟಮೊದಲು ಕರ್ನಾಟಕದಲ್ಲಿ ಬೆಳಗಾಂನಲ್ಲಿ ಕಂಡುಹಿಡಿಯಲಾಯಿತು.

ಹರಡುವ ಮಾರ್ಗ:
- ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ,
- ಪರೀಕ್ಷೆ ಮಾಡದ/ಸೋಂಕಿತ ರಕ್ತ ಮತ್ತು ಉತ್ಪನ್ನಗಳ ವರ್ಗಾವಣೆ ಮಾಡುವುದರಿಂದ
- ಸಂಸ್ಕರಿಸದ ಚೂಪು ಸಾಧನಗಳು, ಸೂಜಿ, ಸಿರಂಜು,ಶಸ್ತ್ರ ಕ್ರಿಯಾ ಸಾಧನಗಳು ಉಪಯೋಗಿಸುವುರಿಂದ
“ಏಡ್ಸ್ ನ ಲಕ್ಷಣಗಳು”
- ಒಂದು ತಿಂಗಳಲ್ಲಿ 10 %ಗಿಂತ ಜಾಸ್ತಿ ತೂಕ ಕಡಿಮೆ ಆಗುವುದು,
- ನಿರಂತರ ಭೇದಿಹಾಗುವುದು,
- ಕ್ಷಯಸೋಂಕು ತಗಲುವುದು ಮುಖ್ಯ ಲಕ್ಷಣಗಳಾಗಿರುತ್ತವೆ.
ವಕೀಲರಾದ ಶ್ರೀಯುತ ಮಣಿರಾಜ್ ರವರು ಮಾತನಾಡಿ, ಏಡ್ಸ್ ಗೆ ಚಿಕಿತ್ಸೆ ಸಾದ್ಯವಿದೆ ಆದರೆ ಗುಣಮುಖರಾಗಲು ಸಾದ್ಯವಿಲ್ಲ, ಅವರ ಜೀವಾವಧಿಯನ್ನು ಹೆಚ್ಚಿಸುವುದು ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸುತ್ತದೆ,ಚಿಕಿತ್ಸೆ ಒಮ್ಮೆ ಆರಂಭಿಸಿದರೆ ಜೀವನಪೂರ್ತಿ ಮುಂದುವರಿಸಲೇಬೇಕು. HIV ವಿರುದ್ಧ ಯಾವುದೇ ಲಸಿಕೆ ಕಂಡುಹಿಡಿದಿರುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗೇಂದ್ರ Sr HIO, ನಾಗೇಶ್ HIO, ನಾಗರಾಜು STLS, ಉಮೇಶ್ STS, CHO’S, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇತರೆ ಸಾರ್ವಜನಿಕರು ಹಾಜರಿದ್ದರು .