ಕೋಪೆನ್‌ಹೇಗನ್: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮಹಿಳಾ ವಿಭಾಗದಲ್ಲಿ ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ೨ನೇ ಸುತ್ತಿನ ಪಂದ್ಯದಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.
ದಕ್ಷಿಣ ಕೊರಿಯಾದ ಜಿಯೋನ್ ಹ್ಯೋಕ್ ಜಿನ್ ೨೧-೧೧, ೨೧-೧೨ ಅಂತರದಲ್ಲಿ ಪಿ.ವಿ.ಸಿಂಧು ವಿರುದ್ದ ಸುಲಭ ಗೆಲುವು ದಾಖಲಿಸಿದರು. ಇನ್ನು ಮಹಿಳಾ ಡಬಲ್ಸ್‌ನಲ್ಲಿ ಶಿಖಾ ಗೌತಮ್-ಅಶ್ವಿನಿ ಭಟ್ ಕೂಡಾ ಸೋತು ಹೊರಬಿದ್ದರು.ಆದರೆ ಪುರುಷರ ವಿಭಾಗದಲ್ಲಿ ಸಿಂಗಲ್ಸ್‌ನಲ್ಲಿ ಭಾರತದ ಲಕ್ಷ್ಯ ಸೇನ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
೨೦೨೧ರಲ್ಲಿ ಕಂಚಿನ ಪದಕ ಗೆದ್ದಿದ್ದ ಸೇನ್, ಮಂಗಳವಾರ ನಡೆದ ೨ನೇ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಜಿಯೋನ್ ಹ್ಯೋಕ್ ಜಿನ್ ವಿರುದ್ಧ ೨೧-೧೧, ೨೧-೧೨ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿದರು.