ಮೈಸೂರು: ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ರಕ್ತದಾನ್ ಮಹಾದಾನ ಗೋ ಬಕ್ತ ಸಂಘಟನೆ ಟ್ರಸ್ಟ್ ಹಾಗೂ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಜೇಷನ್ ಮತ್ತು ಕರ್ನಾಟಕ ಕುಮಾವತ್ ಸಮಾಜ ವತಿಯಿಂದ 50 ಕು ಹೆಚ್ಚು ಜನ ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ವಿಶ್ವ ರಕ್ತದಾನಿಗಳ ದಿನಾಚರಣೆ ವಿಶೇಷವಾಗಿ ಆಚರಿಸಿದರು.
ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ದಾನಗಳಲ್ಲಿ ರಕ್ತದಾನ ಶ್ರೇಷ್ಠ, ಎಲ್ಲಾ ಬಗೆಯ ದಾನಗಳಲ್ಲಿ ಶ್ರೇಷ್ಠವಾಗಿರುವ ದಾನಗಳಲ್ಲಿ ರಕ್ತದಾನವು ಪ್ರಮುಖವಾಗಿದೆ ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡುವ ಉತ್ಸುಕತೆ ತೂರಬೇಕು, ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವನವನ್ನು ಉಳಿಸುವ ಮಹಾವಕಾಶದ ಜತೆಗೆ ಆರೋಗ್ಯದಲ್ಲಿ ರಕ್ತದಾನಿಗಳಿಗೂ ಹಲವು ಲಾಭಗಳಿವೆ, ರಕ್ತದಾನದಿಂದ ನೀಡಿದಾತ ದುರ್ಬಲನಾಗುತ್ತಾನೆ ಎನ್ನುವ ತಪ್ಪು ಕಲ್ಪನೆಯಿದೆ. ಆದರೆ, ಹೃದಯದ ಆರೋಗ್ಯ ಸುಧಾರಿಸುತ್ತದೆ. ತೂಕ ನಿಯಂತ್ರಿಸಬಹುದು, ಕ್ಯಾನ್ಸರ್ ನಂತಹ ರೋಗಗಳು ಬರುವುದನ್ನು ತಪ್ಪಿಸಬಹುದು. ಅದು ಮನಸ್ಸಿನ ಮೇಲೆ ಧನಾತ್ಮಕ ಪ್ರಭಾವ ಬೀರಲಿದೆ ಎಂದರು.

ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಡಾ ಮಹೇಂದ್ರ ಸಿಂಗ್ ಕಾಳಪ್ಪ ಮಾತನಾಡಿ, ಅನೇಕ ಸಂಘಟನೆ ಮತ್ತು ಸರಕಾರೇತರ ಸಂಘಟನೆಗಳ ಶ್ರಮದಿಂದ ಕಳೆದ ದಶಕಗಳಲ್ಲಿ ರಕ್ತದಾನದ ಮಹತ್ವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿದೆ. ಆದರೆ ಈ ಜಾಗೃತಿ ಇನ್ನೂ ಹೆಚ್ಚು ವ್ಯಾಪಕವಾಗುವ ಅವಶ್ಯಕತೆ ಇದೆ. ಈ ಹಿಂದಿನ ದಿನಮಾನಗಳಿಗೆ ಹೋಲಿಸಿದ್ದಲ್ಲಿ ಕಳೆದ ದಶಕದಲ್ಲಿ ರಕ್ತದಾನ ಮಹತ್ವದ ಬಗ್ಗೆ ಜಾಗೃತಿ ಮೂಡಿದೆ. ಕಾಲೇಜುಗಳ ಎನ್ನೆಸ್ಸೆಸ್ ಮತ್ತು ಎನ್‌ಸಿಸಿ ಕೆಡೆಟ್‌ಗಳಿಗೆ ಸೀಮಿತವಾಗಿದ್ದ ರಕ್ತದಾನ ಶಿಬಿರ ಇಂದು ಅನೇಕ ಸರಕಾರೇತರ ಸಂಘಟನೆಗಳು ಮತ್ತು ಯುವಕ ಮಂಡಳಗಳು ರಕ್ತದಾನ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ. ಸಂಗೀತ ಆಲಿಸುವುದು, ಪ್ರವಾಸ ಮತ್ತು ಇತರ ಹವ್ಯಾಸಗಳಂತೆ ಇತ್ತೀಚೆಗೆ ನಿಯಮಿತವಾಗಿ ರಕ್ತದಾನ ಮಾಡುವುದು ಸಹ ಕೆಲ ಯುವಕರ ಹವ್ಯಾಸವಾಗಿದೆ. ಈ ಬಗೆಯ ಸಕಾರಾತ್ಮಕ ಬೆಳವಣಿಗೆೆಗಳು ಆರೋಗ್ಯ ಕ್ಷೇತ್ರದ ಬಹು ದೊಡ್ಡ ಸವಾಲಾಗಿದ್ದ ರಕ್ತದ ಕೊರತೆ ನೀಗಿಸುತ್ತಿವೆ ಎಂದರು.
ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಬನ್ನೂರು ಡಾ ಮಹೇಂದ್ರ ಸಿಂಗ್ ಕಾಳಪ್ಪ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜೀತೋ ಸಂಘಟನೆ ಮೈಸೂರು ಘಟಕದ ಅಧ್ಯಕ್ಷರಾದ ಕಾಂತಿಲಾಲ್ ಚೌಹಾನ್, ಕಾರ್ಯದರ್ಶಿ ಗೌತಮ್ ಸಾಲೇಚಾ, ರಕ್ತದಾನ ಮಹಾದಾನ ಗೋ ಭಕ್ತ ಸಂಘಟನೆ ಸಂಸ್ಥಾಪಕ ಪಿ ಕರ್ಮರಾಮ್ ಸಿರವಿ, ಟ್ರಸ್ಟ್ ಅಧ್ಯಕ್ಷರಾದ ಬಗ್ದರಾಮ್ ಕುಮಾವತ್, ಕಾರ್ಯದರ್ಶಿ ಚಿರಂಜೇಲಾಲ್ ಕುಮಾವತ್, ಪತ್ರಿಕೆ ವರದಿಗಾರ ಜನಕ್ ಸಿಂಗ್, ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.