ಮಂಡ್ಯ: ಜಿಲ್ಲಾಡಳಿತ, ಜಿ.ಪಂ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಮಂಡ್ಯ ಡಿಎಚ್ಓ ಕಚೇರಿ ಆವರಣದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಎಡಿಸಿ ಡಾ.ಎಚ್.ಎನ್.ನಾಗರಾಜು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ರಕ್ತದಾನಿಗಳನ್ನ ಸನ್ಮಾನಿಸಿ ಅಭಿನಂದಿಸಲಾಯಿತು.

ಎಡಿಸಿ ಡಾ.ಎಚ್.ಎನ್.ನಾಗರಾಜು ಈ ವೇಳೆ ಮಾತನಾಡಿ, ರಕ್ತ ದಾನದ ಮಹತ್ವವನ್ನು ಯುವ ಸಮುದಾಯ ಅರಿಯಬೇಕು. ಹಾಗೂ ಇತರರಿಗೆ ಪ್ರೇರಣೆಯಾಗಬೇಕು. ರಕ್ತದ ಕೊರತೆಯಾಗದಂತೆ ಮಂಡ್ಯ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆ ಗಳ ಮೂಲಕ ಶಿಬಿರಗಳನ್ನು ಆಯೋಜನೆ ಮಾಡುವುದರ ಮೂಲಕ ರಕ್ತ ಸಂಗ್ರಹ ಮಾಡಲಾಗುತ್ತಿದೆ. ಹಾಗಾಗಿ ಎಲ್ಲರು ಸಹ ರಕ್ತದಾನ ಮಾಡುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಎಚ್ಓ ಡಾ. ಮೋಹನ್. ಡಾ.ಆಶಾಲತಾ, ಡಾ. ಕುಮಾರ್. ಸೇರಿ ಹಲವರು ಭಾಗಿಯಾಗಿದ್ದರು.