Friday, April 4, 2025
Google search engine

Homeಸ್ಥಳೀಯನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವ ಕ್ಯಾನ್ಸರ್ ಜಾಗೃತಿ ಸಪ್ತಾಹ 2024

ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವ ಕ್ಯಾನ್ಸರ್ ಜಾಗೃತಿ ಸಪ್ತಾಹ 2024

ಮೈಸೂರು:ಮೈಸೂರಿನ ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮರುಳೆೇಶ್ವರ ನೇಗಿಲಯೋಗಿ ಸೇವಾಭವನದಲ್ಲಿ ಮಹಿಳೆಯರಿಗೆ , ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ತ್ರೀರೋಗಶಾಸ್ತ್ರದ ಆಂಕೊಲಾಜಿಯು ಬಗ್ಗೆ ತಿಳುವಳಿಕೆ ಕುರಿತ ಕಾರ್ಯಗಾರವನ್ನು ಏರ್ಪಾಡಿಸಲಾಗಿತ್ತು. ಸ್ತ್ರೀರೋಗಶಾಸ್ತ್ರದ ಆಂಕೊಲಾಜಿಯು ಮಹಿಳೆಯರಿಗೆ ನಿರ್ದಿಷ್ಟವಾದ ಕ್ಯಾನ್ಸರ್ ಗಳಾದ ಗರ್ಭಕಂಠದ ಕ್ಯಾನ್ಸರ್, ಸ್ಥನದ ಕ್ಯಾನ್ಸರ್, ಎಂಡೊಮೆಟ್ರಿಯಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ವಾಲ್ವಾರ್ ಕ್ಯಾನ್ಸರ್ ಗಳ ಅಪಾಯದ ಅಂಶಗಳು,ಸಾಮಾನ್ಯ ಲಕ್ಷಣಗಳು, ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಅವಂತ್ ಬಿ ಕೆ ಜಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ಮತ್ತು ಕ್ಯಾನ್ಸರ್ ರೋಗ ತಜ್ಞೆ (ಆನ್ಕೊಲೊಜಿಸ್ಟ್ )ಆಗಿ ಕಾರ್ಯನಿರ್ವಹಸುತ್ತಿರುವ ಡಾ.ಡಿ ಆರ್ ರಮ್ಯಾ . ರವರು HPV ಲಸಿಕೆ, ಸ್ಕ್ರೀನಿಂಗ್, PAP ಸ್ಮೀಯರ್ / HPV ಡಿಎನ್ಎ ಪರೀಕ್ಷೆ, MRI ಮತ್ತು ಮ್ಯಾಮೊಗ್ರಾಮ್ ಸ್ಕ್ರೀನಿಂಗ್ ಹೀಗೇ ಮುಂತಾದ ಪರೀಕ್ಷೆಗಳನ್ನು ಯಾವ ಸಂದರ್ಭಗಳಲ್ಲಿ ಮಾಡಲಾಗುವುದು ಎಂದು ವಿವರವಾಗಿ ತಿಳಿಸಿದರು .

ಈ ಸಂದರ್ಭದಲ್ಲಿ ಮಹಿಳಾ ಸದಸ್ಯರೊಂದಿಗೆ ಸಂವಾದವನ್ನು ಏರ್ಪಾಡಿಸಲಾಗಿತ್ತು. ಮಹಿಳೆಯರು ತಮ್ಮೆಲ್ಲ ಸಂದೇಹಗಳಿಗೆ ಉತ್ತರವನ್ನು ಪಡೆದುಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಜೆ ಶೋಭ ರವರು ವಹಿಸಿದ್ದರು .ಈ ಸಂದರ್ಭದಲ್ಲಿ ಹಲವಾರು ಮಹಿಳೆಯರು ಉಪಸ್ಥಿತರಿದ್ದು ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.

RELATED ARTICLES
- Advertisment -
Google search engine

Most Popular