ಮಂಡ್ಯ: ಇಂದು ೨೦೨೩ರ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಆಡಲಿದೆ. ಭಾರತ ಗೆಲುವಿಗಾಗಿ ಮಂಡ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಶಕ್ತಿ ದೇವತೆ ಕಾಳಿಕಾಂಬ ದೇವಿಗೆ ಈಡುಗಾಯಿ ಹೊಡೆದು ವಿಶೇಷ ಪೂಜೆ ಸಲ್ಲಿಸಿದರು.
ಟೀಮ್ ಭಾರತ ಗೆಲುವು ನಿಶ್ಚಿತ ಎಂದ ಅಭಿಮಾನಿಗಳು ಭಾರತದ ತ್ರಿವರ್ಣ ಧ್ವಜ ಹಿಡಿದು ಅಭಿಮಾನಿಗಳಿಂದ ಜಯ ಘೋಷಿದರು. ‘ಗೆದ್ದು ಬಾ ಟೀಂ ಇಂಡಿಯಾ’ ಎಂದು ಹಾರೈಸಿದ್ದಾರೆ.