ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಪಡುಕೋಟೆ ಸರ್ಕಾರಿ ಶಾಲಾ ಆವರಣದಲ್ಲಿ ಪೀಪಲ್ ಟ್ರೀ ಸಂಸ್ಥೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದ ಸಂಶೋಧಕ ಚೆನ್ನರಾಜ್ ಮಾತಾನಾಡಿ ಬದಲಾದ ಜಾಗತಿಕ ತಾಪಮಾನದಲ್ಲಿ ನಮ್ಮ ಪರಿಸರ ಸಂಪೂರ್ಣವಾಗಿ ಹದಗೆಟ್ಟಿದ್ದು ಮುಂದಿನ ಪೀಳಿಗೆಗೆ ಇದು ಮಾರಕವಾಗಲಿದೆ. ಯಾಕೆಂದರೆ ನಾವು ಕೃಷಿಯಲ್ಲಿ ಗೊತ್ತಿಲ್ಲದೇ ಬಳಸುತ್ತಿರುವ ಕೀಟಕ್ರಿಮಿ ನಾಶಕ ಔಷಧಿಗಳು ಮಾನವ ಸಂತತಿಯನ್ನ ವಿನಾಶದ ಅಂಚಿಗೆ ದೂಡುತ್ತಿವೆ ಎಂದು ಎಳೆ ಎಳೆಯಾಗಿ ವಿವರಿಸಿದರು.

ನಂತರ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೀವಿಕ ಸಂಚಾಲಕ ಉಮೇಶ್. ಬಿ. ನೂರಲಕುಪ್ಪೆ ಮಾತಾನಾಡಿ ಇಂದು ನಮ್ಮ ತಾಲ್ಲೂಕಿನ ಬಹುಪಾಲು ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಬಳಸುತ್ತಿರುವುದರಿಂದ ನಮ್ಮಲ್ಲಿ ಆಹಾರ ಉತ್ಪಾದನೆ ಚಟುವಟಿಕೆಗಳು ಕಡಿಮೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾದ ಆಹಾರ ಪದಾರ್ಥಗಳ ಕೊರತೆಯಾಗಿ ತಿನ್ನುವ ಅನ್ನಕ್ಕೂ ನಾಳೆ ಕಷ್ಟಕರ ವಾತಾವರಣ ನಿರ್ಮಾಣವಾಗಲಿದೆ ಅದ್ದರಿಂದ ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹಾಳು ಮಾಡದೇ ನೈಸರ್ಗಿಕವಾಗಿ ತಲಾ ತಲಾತಲಾಂತರದಿಂದ ಬಳುವಳಿಯಾಗಿ ಬಂದಿರುವ ಪರಿಸರ ಸಂಪತ್ತನ್ನ ಉಳಿಸಿಬೆಳೆಸುವ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.

ಬಳಿಕ ಮಾತಾನಾಡಿದ ಗ್ರಾಮ ಪಂಚಾಯತಿ ಸದಸ್ಯ ಎಡತೊರೆ ಮಹೇಶ್ ಪೀಪಲ್ ಟ್ರೀ ಸಂಸ್ಥೆ ನಮ್ಮ ತಾಲೋಕಿನಲ್ಲಿ ಉತ್ತಮವಾದ ಸೇವೆಯನ್ನು ಮಾಡುತ್ತಿದ್ದು ಇಂದು ಕೂಡ ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಮಯದಲ್ಲಿ ಅರಣ್ಯ ಇಲಾಖೆಯ ಸತ್ಯನಿಧಿ. ಶಿಕ್ಷಕಿ ಅಪೋಲಿಯನ್ ರವರು ಪರಿಸರ ಸದ್ಬಳಕೆ ಕುರಿತು ಮಾತಾನಾಡಿದರು.ಕಾರ್ಯಕ್ರಮದಲ್ಲಿ ಪಡುಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮಿ ದಿವಾಕರ್. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಂಕಪ್ಪ. ಆರೋಗ್ಯ ಸಂಯೋಜಕಿ ಅಶ್ವನಿ. ಪಂಚಾಯತಿ ಸದಸ್ಯ ಮಹೇಶ್. ಅರಣ್ಯ ಇಲಾಖೆಯ ಸತ್ಯನಿಧಿ. ಮುಖ್ಯ ಶಿಕ್ಷಕರಾದ ಶ್ರೀಪಾಲ್. ನಂಜುಂಡ ಸ್ವಾಮಿ. ಶಿಕ್ಷಕರಾದ ಶಿವಣ್ಣ. ಪ್ರದೀಪ್. ಅಪೋಲಿಯನ್. ಜೆಸ್ಸಿ. ಎಸ್ ಡಿ ಎಮ್ ಸಿ ಶಶಿಕಲಾ. ಕಮಲ್ ಕಣ್ಣನ್. ನಾಗರಾಜ್. ಚಿಕ್ಕನಂಜಯ್ಯ, ಷಕರು ಮತ್ತು ಮಕ್ಕಳು ಹಾಜರಿದ್ದು. ಈ ಕಾರ್ಯಕ್ರಮವನ್ನು ಪೀಪಲ್ ಟ್ರೀ ರುದ್ರಪ್ಪ ನಡೆಸಿಕೊಟ್ಟರು. ಸಂಯೋಜಕ ಜವರೇಗೌಡ ಸ್ವಾಗತಿಸಿದರು. ಚೆನ್ನಬಸಪ್ಪ ವಂದಿಸಿದರು.