ವರದಿ: ಎಡತೊರೆ ಮಹೇಶ್
ಹೆಚ್ ಡಿ ಕೋಟೆ : ಕರ್ನಾಟಕ ರಾಜ್ಯ ರೈತ ಪರ್ವ ಹಾಗೂ ಅಮ್ಮನ ಮಡಿಲು ಸಹಯೋಗದೊಂದಿಗೆ ಪಟ್ಟಣದ ಹ್ಯಾಂಡ್ ಪೋಸ್ಟ್ ಯರಹಳ್ಳಿ ಸಮೀಪದಲ್ಲಿರುವ ತಾರಕ ಫಂಕ್ಷನ್ ಹಾಲ್ ನಲ್ಲಿ 23-12-2024 ಸೋಮವಾರ ಬೆಳಿಗ್ಗೆ 10 ಗಂಟೆ ಗೆ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಪರ್ವ ಸಂಘದ ರಾಜ್ಯ ಕಾರ್ಯಧ್ಯಕ್ಷ ವೈ. ಎಲ್ ನವೀನ್ ಕುಮಾರ್ ತಿಳಿಸಿದರು.
ರೈತ ದಿನಾಚರಣೆ ಎಂದರೆ ಮುಂದಿನ ದಿನಗಳಲ್ಲಿ ರೈತರ ಹಬ್ಬವಾಗಿ ಆಚರಿಸಬೇಕು ಈ ವರ್ಷದಿಂದ ನಮ್ಮ ತಾಲೂಕಿನಲ್ಲಿ ಹಳ್ಳಿಕಾರ್ ಎತ್ತುಗಳಿಂದ ಎತ್ತಿನಗಾಡಿ ಸ್ಪರ್ಧೆ, ಹಸು ಹಾಲು ಕರೆಯುವ ಸ್ಪರ್ಧೆ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಹಾಗೂ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು ತಾಲೂಕಿನ ಹಾಗೂ ಜಿಲ್ಲೆಯ ರೈತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಶಾಸಕ ಅನಿಲ್ ಚಿಕ್ಕಮಾದು ಹಾಗೂ ರಾಜ್ಯಾಧ್ಯಕ್ಷ ಅರುಣ್ ಕುಮಾರ್ ಮತ್ತು ರೈತ ಮುಖಂಡರು ಹಾಗೂ ಅನೇಕ ಗಣ್ಯರು ಆಗಮಿಸುತ್ತಿದ್ದು ತಾಲೂಕಿನ ಎಲ್ಲ ರೈತ ಬಾಂಧವರು ಆಗಮಿಸಬೇಕು ಈ ದೇಶದ ಬೆನ್ನೆಲುಬು ರೈತ, ರೈತರ ಬೆನ್ನೆಲುಬು ಎತ್ತುಗಳು ಎಲ್ಲಾ ಬನ್ನಿ ರೈತರ ಹಬ್ಬ ಆಚರಿಸೋಣ ಎಂದು ತಿಳಿಸಿದರು.