Tuesday, April 22, 2025
Google search engine

Homeರಾಜ್ಯಸುದ್ದಿಜಾಲವಿಶ್ವಮಾನವ ದಿನಾಚರಣೆ,ವಿಶ್ವಕರ್ಮ ಅಮರಶಿಲ್ಪಿ ಶ್ರೀ ಜಕಣಚಾರಿ ಜಯಂತಿ: ಪೂರ್ವಸಿದ್ದತಾ ಸಭೆ

ವಿಶ್ವಮಾನವ ದಿನಾಚರಣೆ,ವಿಶ್ವಕರ್ಮ ಅಮರಶಿಲ್ಪಿ ಶ್ರೀ ಜಕಣಚಾರಿ ಜಯಂತಿ: ಪೂರ್ವಸಿದ್ದತಾ ಸಭೆ

ಧಾರವಾಡ : ಪ್ರತಿ ವರ್ಷದಂತೆ ವಿಶ್ವಮಾನವ ದಿನಾಚರಣೆ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಶ್ರೀ ಜಕಣಚಾರಿ ಸಂಸ್ಮರಣಾ ದಿನಾಚರಣೆಯನ್ನು ವಿಜೃಂಭಣೆಯಿಂದ ಅರ್ಥಗರ್ಭಿತವಾಗಿ ಆಚರಿಸೋಣ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಡಿ.22 ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ವಿಶ್ವಮಾನವ ಜಯಂತಿ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಶ್ರೀ ಜಕಣಚಾರಿ ಜಯಂತಿಯ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಜಯಂತಿಗಳ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಿ, ಸಾಧಕರಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಕವನವಾಚಾನ, ಪ್ರಬಂಧ, ಸ್ಪರ್ಧೆಗಳ ವಿಜೇತರಿಗೆ ಗೌರವಿಸಿ, ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.

ವಿಶ್ವಮಾನವ ಕುವೆಂಪು ಜಯಂತಿ ಆಚರಣೆಯನ್ನು ಡಿ.29 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕøತಿಕ ಸಭಾಭವನದಲ್ಲಿ ಹಾಗೂ ವಿಶ್ವಕರ್ಮ ಅಮರಶಿಲ್ಪಿ ಶ್ರೀ ಜಕಣಚಾರಿ ಸಂಸ್ಮರಣಾ ದಿನಾಚರಣೆಯನ್ನು ಜನವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕøತಿಕ ಸಭಾಭವನದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಜಯಂತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಸಾಹಿತಿಗಳಾದ ಡಾ. ಲಿಂಗರಾಜ ಅಂಗಡಿ, ಡಾ. ಕೆ.ಆರ್. ದುರ್ಗಾದಾಸ, ಮಾಲತಿ ಪಟ್ಟಣಶೆಟ್ಟಿ, ಶಾಂತಿನಾಥ ದಿಬ್ಬದ, ಶಂಕರ ಕುಂಬಿ ಹಾಗೂ ಸಮುದಾಯದ ಮುಖಂಡರಾದ ವಸಂತ ಅರ್ಕಚಾರ್, ಮಹಾರುದ್ರಪ್ಪ ಬಡಿಗೇರ, ಮಂಜುನಾಥ ಬಡಿಗೇರ, ಕಾಳಪ್ಪ ಬಡಿಗೇರ, ಸುವರ್ಣ ಪತ್ತಾರ, ಭಾಸ್ಕರ ಬಡಿಗೇರ, ಸಂತೋಷ ಬಡಿಗೇರ, ವಿನೋದ್ ಬಡಿಗೇರ, ಸಾವಿತ್ರಿ ಬಡಿಗೇರ ಅವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular