Friday, April 11, 2025
Google search engine

Homeರಾಜ್ಯಸುದ್ದಿಜಾಲಋಗ್ವೇದಿ ಯೂತ್ ಕ್ಲಬ್ ವತಿಯಿಂದ ವಿಶ್ವ ಹಲಸು ಹಣ್ಣು ದಿನಾಚರಣೆ

ಋಗ್ವೇದಿ ಯೂತ್ ಕ್ಲಬ್ ವತಿಯಿಂದ ವಿಶ್ವ ಹಲಸು ಹಣ್ಣು ದಿನಾಚರಣೆ

ಚಾಮರಾಜನಗರ: ಪ್ರತಿ ವರ್ಷ ಜುಲೈ 4 ಹಲಸು ದಿನವನ್ನು ಆಚರಿಸಲಾಗುವುದು .ಹಲಸು ಹಣ್ಣು ಸ್ವಾದಿಷ್ಟ ,ರುಚಿಕರ ಹಾಗೂ ತುಂಬಾ ಆರೋಗ್ಯದಾಯಕವಾದದ್ದು. ಚಾಮರಾಜನಗರ ಜಿಲ್ಲೆ, ಸುವರ್ಣಾವತಿ ನದಿ ತೀರದ ಹೆಬ್ಬಸೂರು ,ಚಂದಕವಾಡಿ ಕೂಡ್ಲೂರು, ದೊಡ್ಡ ರಾಯ ಪೇಟೆ, ಆಲೂರು, ಸರಗೂರು, ಹೊಮ್ಮ ಗ್ರಾಮದ ಮುಂತಾದ ಸ್ಥಳಗಳ ಹಣ್ಣುಗಳು ಅತ್ಯಂತ ಸ್ವಾದಿಷ್ಟವಾಗಿದ್ದು ರಾಜ್ಯ ಹಾಗು ದೇಶದ ವಿವಿಧ ಕಡೆಯಿಂದ ಹಣ್ಣುಗಳನ್ನು ಪಡೆಯಲು ಬರುವುದು ಹೆಮ್ಮೆಯ ವಿಷಯವೆಂದು ಸಂಸ್ಕೃತಿ ಚಿಂತಕ ಹಾಗೂ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ಎನ್ ಋಗ್ವೇದಿ ತಿಳಿಸಿದರು.

ಅವರು ವಿಶ್ವ ಹಲಸು ದಿನದ ಅಂಗವಾಗಿ ದೊಡ್ಡರಾಯ ಪೇಟೆ ಕ್ರಾಸ್ ಬಳಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ವಿಶ್ವ ಹಲಸು ಹಣ್ಣು ದಿನ ದಲ್ಲಿ ಉದ್ಘಾಟಿಸಿ ಮಾತನಾಡುತ್ತ ಹಲಸು ಹಣ್ಣು ಬಾಂಗ್ಲಾದೇಶ ಹಾಗೂ ಶ್ರೀಲಂಕಾದ ರಾಷ್ಟ್ರೀಯ ಹಣ್ಣಾಗಿದೆ. ಭಾರತದಲ್ಲಿ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಈ ಹಣ್ಣು ಅತ್ಯಂತ ಫಲ ಭರಿತವಾಗಿದೆ. ಹಸಿದಾಗ ಹಲಸು ಉಂಡಾಗ ಮಾವು ಎಂಬ ನುಡಿಯೇ ಇದೆ. ಹಲಸಿನ ಹಣ್ಣು ನಿತ್ಯಹರಿದ್ವರ್ಣ, ಬಿಸಿ ವಾತಾವರಣ ಮತ್ತು ತೇವಾಂಶವುಳ್ಳ ಉಷ್ಣವಲಯದ ಹವಾಮಾನದಲ್ಲಿ ಉತ್ತಮವಾಗಿ ಬೆಳೆಯುತ್ತಿದೆ. 1563 ರಲ್ಲಿ ಗಾರ್ಸಿಯ ಡ ಓರ್ತಾ ರವರು ಬರೆದ ಪುಸ್ತಕದಲ್ಲಿ ಜಾಕ್ ಫ್ರೂಟ್ ಎಂಬ ಇಂಗ್ಲಿಷ್ ಪದವನ್ನು ಬಳಸಿದ್ದಾರೆ. .ಇದು ಪೋರ್ಚುಗೀಸರ ಜಾಕದಿಂದ ಬಂದಿದೆ ಹಸಿದಾಗ ಹಲಸಿನ ಹಣ್ಣು ಬಹು ರುಚಿಕರವಾಗಿರುತ್ತದೆ.

ಹಲಸಿನ ಹಣ್ಣು ತಿಂದು ಹುಲಸಾದ ಮನಸ್ಸು ಮತ್ತು ಹೃದಯವನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ನಡೆಸೋಣ ಎಂದು ದೊಡ್ಡರಾಯ ಪೇಟೆ ಕ್ರಾಸ್ ಬಳಿ ಹಲವು ವರ್ಷಗಳಿಂದ ನಿರಂತರವಾಗಿ ಹಲಸು ಹಣ್ಣಿನ ವ್ಯಾಪಾರ ಮಾಡುವ ಮೂಲಕ ಹಸಿದ ಅನೇಕ ಜನರಿಗೆ ಹಣ್ಣು ನೀಡುವ ಮೂಲಕ ಸೇವೆ ಸಲ್ಲಿಸುತ್ತಿರುವ ಕೂಡಲೂರು ಕೆಂಪಣ್ಣ ರವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಉಪನ್ಯಾಸಕ ನಾಗರಾಜು ಮಾತನಾಡಿ ಹಲಸಿನ ಹಣ್ಣು ಅಗ್ರಸ್ಥಾನ ಪಡೆದಿದೆ. ಹಲಸು ಬಹಳ ಶಕ್ತಿಶಾಲಿ ಹಾಗೂ ಜೀವಸತ್ವಗಳ ಉತ್ಕೃಷ್ಟ ಗುಣಗಳನ್ನು ಹೊಂದಿದೆ. ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ನದಿ ತೀರದ ಹಣ್ಣಿಗೆ ವಿಶೇಷವಾದ ಬೆಲೆ ಇದೆ.ಹಾಗೂ ಜನ ಬಹಳಷ್ಟು ಪಡುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೃಷ್ಣಮೂರ್ತಿ, ಕೂಡ್ಲೂರು ನಂದೀಶ, ಜಾಲಹಳ್ಳಿ ಹುಂಡಿ ಮಹದೇವೇಗೌಡ, ಮಹದೇವ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular