Saturday, April 19, 2025
Google search engine

Homeರಾಜ್ಯಶ್ಲೋಕ ಪಠಣದಲ್ಲಿ ವಿಶ್ವ ದಾಖಲೆ: ಪೃಥು ಪಿ ಅದ್ವೈತ್’ಗೆ ಸನ್ಮಾನ

ಶ್ಲೋಕ ಪಠಣದಲ್ಲಿ ವಿಶ್ವ ದಾಖಲೆ: ಪೃಥು ಪಿ ಅದ್ವೈತ್’ಗೆ ಸನ್ಮಾನ

ಮೈಸೂರು: ಶ್ಲೋಕ ಪಠಣದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಪೃಥು ಪಿ ಅದ್ವೈತ್ ರವರನ್ನು ಆದರ್ಶ ಸೇವಾ ಸಂಘದ ಕಛೇರಿಯಲ್ಲಿ ಸನ್ಮಾನಿಸಲಾಯಿತು.

ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಶಾಲೆಯಲ್ಲಿ ನೆಡೆದ ವಿಶ್ವ ದಾಖಲೆ ಮಹೋತ್ಸವ-2024 ರಲ್ಲಿ ಭಾಗವಹಿಸಿ ಮುವತ್ತು ನಿಮಿಷಗಳಲ್ಲಿ 150 ಶ್ಲೋಕಗಳನ್ನು ಹೇಳಿ ವಿಶ್ವ ದಾಖಲೆ ನಿರ್ಮಿಸಿದ ಪೃಥು ಪಿ ಅದ್ವೈತ್ ರವರನ್ನು ಮೈಸೂರಿನ ಆದರ್ಶ ಸೇವಾ ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷರಾದ G R ನಾಗರಾಜ್ ಹಾಗೂ ಜಗದಾಂಬ ದಂಪತಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಆದರ್ಶ ಸೇವಾ ಸಂಘದ ಖಜಾಂಚಿ ಶೇಷಾದ್ರಿ, ನಿರ್ದೇಶಕ ಗಿರೀಶ್, ಸುಬ್ರಹ್ಮಣ್ಯಂ, ಕೆ.ಆರ್.ಗಣೇಶ್ , ಸರಸ್ವತಿ ಹಾಗೂ ಪೃಥು ಅದ್ವೈತ್ ಪೋಷಕರಾದ ಪುನೀತ್ ಜಿ ಕೂಡ್ಲೂರು ಹಾಗೂ ಪೂಜಾ ಎನ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular