Saturday, June 21, 2025
Google search engine

HomeUncategorizedರಾಷ್ಟ್ರೀಯವಿಶಾಖಪಟ್ಟಣಂನಲ್ಲಿ ಪ್ರಧಾನಿಮೋದಿ ನೇತೃತ್ವದಲ್ಲಿ ವಿಶ್ವದಾಖಲೆ ಯೋಗ ಉತ್ಸವ

ವಿಶಾಖಪಟ್ಟಣಂನಲ್ಲಿ ಪ್ರಧಾನಿಮೋದಿ ನೇತೃತ್ವದಲ್ಲಿ ವಿಶ್ವದಾಖಲೆ ಯೋಗ ಉತ್ಸವ

ವಿಶಾಖಪಟ್ಟಣಂ: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಶಾಖಪಟ್ಟಣಂ ನಗರದ ಆರ್‌.ಕೆ ಬೀಚ್‍ನಿಂದ ಭೋಗಪುರಂವರೆಗೆ 26 ಕಿಮೀ ಕಾರಿಡಾರ್ ನಿರ್ಮಾಣ ಮಾಡಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಯೋಗಾಭ್ಯಾಸಿಗಳು ಭಾಗವಹಿಸಿ ಇತಿಹಾಸ ನಿರ್ಮಿಸಿದರು.

ಈ ಕಾರಿಡಾರ್‌ನಲ್ಲಿ 3 ಲಕ್ಷಕ್ಕೂ ಅಧಿಕ ಜನ ಯೋಗಾಸನ ಮಾಡಿದ್ದಾರೆ. ಇನ್ನೂ 25,000 ವಿದ್ಯಾರ್ಥಿಗಳಿಂದ 108 ನಿಮಿಷ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದರು. ಈ ಬಾರಿ `ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ’ ಎಂಬ ಥೀಮ್’ನಲ್ಲಿ ಈ ಬಾರಿಯ ಯೋಗ ದಿನ ಆಚರಣೆ ಮಾಡಲಾಗುತ್ತಿದೆ.

ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದದು, 25,000 ವಿದ್ಯಾರ್ಥಿಗಳಿಂದ ನಿರಂತರವಾಗಿ 108 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಪ್ರದರ್ಶನ. ಇದು ಕೇವಲ ಯೋಗಾಭ್ಯಾಸವಲ್ಲ, ಶಿಸ್ತಿನ, ಶಕ್ತಿಯ ಮತ್ತು ಸಮರ್ಪಣೆಯ ಪ್ರತೀಕವಾಗಿತ್ತು. ಇಂತಹ ಸಾಮೂಹಿಕ ಪ್ರದರ್ಶನವು ವಿಶ್ವದ ಗಮನ ಸೆಳೆದಿದ್ದು, ಯೋಗವನ್ನು ಯುವಜನತೆಗೆ ಹತ್ತಿರ ಮಾಡುವ ನಿಟ್ಟಿನಲ್ಲಿ ಮಹತ್ವಪೂರ್ಣ ಹೆಜ್ಜೆಯಾಗಿದೆ.

ವಿಶ್ವದಾಖಲೆ ಪ್ರಮಾಣದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶಿಷ್ಟ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದವು. ಸುಮಾರು 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 1,200 ಸಿಸಿಟಿವಿ ಕ್ಯಾಮೆರಾ, ಡ್ರೋನ್‌ಗಳ ಮೂಲಕ ನಿಗಾವಣೆ ಹಾಗೂ 3,000ಕ್ಕೂ ಹೆಚ್ಚು ಬಸ್‌ಗಳ ಮೂಲಕ ಭಾಗವಹಿಸುವವರನ್ನು ಸ್ಥಳಕ್ಕೆ ತಲುಪಿಸುವ ವ್ಯವಸ್ಥೆ.

RELATED ARTICLES
- Advertisment -
Google search engine

Most Popular