ಮೈಸೂರು: ಮೈಸೂರು ಜಿಲ್ಲಾ ಕುಸ್ತಿ ಸಂಘದ ಇಂದು ಜ.೨೮ರ ಮಧ್ಯಾಹ್ನ ೩ ಗಂಟೆಗೆ ನಗರದ ಡಿ.ದೇವರಾಜ ಅರಸು ವಿವಿದ್ದೋದ್ದೇಶ ಕ್ರೀಡಾಂಗಣದಲ್ಲಿ ೩೦ ಜೊತೆ ನಾಡಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಪೈಲ್ವಾನ್ ಚಂದ್ರಶೇಖರ್ ಇಟ್ಟಿಗೆಗೂಡು ತಿಳಿಸಿದರು.
ವಿಶೇಷ ಅತಿಥಿಗಳಾಗಿ ಚಲನಚಿತ್ರ ನಟ ಶ್ರೀಮುರುಳಿ, ನಿವೃತ್ತ ಅಧಿಕಾರಿ ರಾಮಚಂದ್ರಪ್ಪ ಆಗಮಿಸಲಿದ್ದಾರೆ. ಈ ವೇಳೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕುಸ್ತಿಪಟು ಪೈ. ಉತ್ತಮ್ ಕದಂ, ಪೈ. ಕೇದಾರ್‌ನಾಥ್, ಪೈ. ಸ್ಟ್ರಿಂಗ್ ಇಕ್ಬಾಲ್, ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ ಇನ್ನಿತರರು ಹಾಜರಿರುವರು. ಪಂದ್ಯಾವಳಿಯಲ್ಲಿ ಖ್ಯಾತ ಕುಸ್ತಿ ಪಟುಗಳಿಂದ ಸೋಲು, ಗೆಲುವಿನವರೆಗಿನ ರೋಚಕ ಕುಸ್ತಿ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.