ಮಂಡ್ಯ:ಬರವಣಿಗೆ ಎಂಬುದು ನಿರಂತರವಾಗಿ ಓದುವುದನ್ನು ಬಯಸುತ್ತದೆ.ನಿರಂತರವಾಗಿ ಬರೆಯಲು ಸಾಧ್ಯವಾಗುತ್ತದೆ. ಬರವಣಿಗೆಯಲ್ಲಿ ಉತ್ತಮವಾದ ಶೈಲಿ ರುದ್ಗತವಾಗುತ್ತದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶ್ ಗೌಡ ಅವರು ತಿಳಿಸಿದರು.
ಕರ್ನಾಟಕ ಸಂಘ ಮಂಡ್ಯ ಇವರ ವತಿಯಿಂದ ಸಂಘದ ಕೆ.ಟಿ.ಶಿವಲಿಂಗಯ್ಯರವರ ಸಭಾಂಗಣದಲ್ಲಿ ನಡೆದ
ಡಾ.ಎಂ.ಎಸ್.ಅನಿತಾ ರವರ ‘ಅವ್ವ ಕಾಯುತ್ತಿದ್ದಾಳೆ’ ಕೃತಿಯ ಹಿಂದಿ ಅನುವಾದ ಅಮ್ಮರಾಹ್ ದೇಖ್ ರಹೀ ಹೈ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಒಂದು ಪುಸ್ತಕವನ್ನು ಅಧ್ಯಯನ ಮಾಡಿದರೆ,ನಮಗೆ ಹೊಸ ಹೊಸ ಭಾವನೆಗಳನ್ನು ನೀಡುತ್ತದೆ ಎಂದರು.
ಅನಿತಾ ಅವರು ಕವಯಿತ್ರಿಯಾಗಿ ಬರವಣಿಗೆಯ ಲೋಕವನ್ನು ಪ್ರವೇಶ ಮಾಡಿದ್ದಾರೆ.ಅವರ ಸ್ನೇಹಿತೆ ಪುಸ್ತಕವನ್ನು ಅನುವಾದಿಸಿ ಅವರನ್ನು ವಿಸ್ತರಿಸುವಂತಹ ಕಾರ್ಯವನ್ನು ಮಾಡಿದ್ದಾರೆ.ಇದೇ ರೀತಿಯ ಉತ್ತಮ ಪುಸ್ತಕಗಳನ್ನು ಮತ್ತಷ್ಟು ಬರೆಯಲಿ, ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರದಲ್ಲಿ ಮೈಸೂರು ವಿ.ವಿಯ ಹಿಂದಿ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರತಿಭಾ ಮೊದಲಿಯಾರ್, ಲೇಖಕರಾದ ಡಾ.ಎಂ.ಎಸ್.ಅನಿತಾ, ಡಾ.ಶಾಫಿಯ ಫರ್ ಹಿನ್, ಎಂ.ಯು.ಶ್ವೇತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.