ಯಳಂದೂರು: ಪಟ್ಟಣದ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಿಖಿತ ಎಸ್. ಅನುರಾಧರವರಿಗೆ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಲಭಿಸಿದೆ.
ಡಾ.ಎಂ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಇವರು ಎ ಸ್ಟಡಿ ಆಫ್ ಟೀಚರ್ಸ್ ಅಕೋಂಟೆಬಿಲಿಟಿ ಅಂಡ್ ಇಟ್ಸ್ ಇನ್‌ಪ್ಲೂಯೆನ್ಸ್ ಆನ್ ದೇರ್ ಪರ್‌ಫಾರ್‍ಮೆನ್ಸ್ ಎಂಬ ಮಹಾಪ್ರಬಂಧವನ್ನು ವಾಣಿಜ್ಯಶಾಸ್ತ್ರ ವಿಷಯದಲ್ಲಿ ಆಂಗ್ಲಭಾಷೆಯಲ್ಲಿ ಸಿದ್ಧಪಡಿಸಿದ್ದರು. ಇದಕ್ಕಾಗಿ ಮೈಸೂರು ವಿವಿ ಇವರಿಗೆ ಪಿಎಚ್‌ಡಿ ನೀಡಲಾಗಿದೆ ಎಂದು ವಿವಿದ ಕುಲಸಚಿವ (ಪರಿಕ್ಷಾಂಗ) ಪ್ರೊ. ಕೆ.ಎಂ. ಮಹದೇವನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.