ಯಳಂದೂರು: ಪಟ್ಟಣದ ಉಪ್ಪಾರ ಬಡಾವಣೆಯ ನಿವಾಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ವೈ.ಎಸ್. ಶಿವರಾಮು(೪೯) ಗುರುವಾರ ಹೃದಯಾಘಾತದಿಂದ ತಮ್ಮ ನಿವಾಸದಲ್ಲಿ ಮೃತಪಟ್ಟರು.
ಮೃತರಿಗೆ ಪತ್ನಿ ರೇಣುಕಾ ಸೇರಿದಂತೆ ಒರ್ವ ಪುತ್ರ ಹಾಗೂ ಒರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆಯು ಇವರ ಜಮೀನಿನಲ್ಲಿ ಗುರುವಾರ ಸಂಜೆ ನೆರವೇರಿತು.