Monday, April 21, 2025
Google search engine

Homeಸ್ಥಳೀಯಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್

ಮೈಸೂರು: ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿಆಯುಧಗಳಿಗೆ ಸೋಮವಾರ ಆಯುಧ ಪೂಜೆ ನೆರವೇರಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ ಆಯುಧಗಳನ್ನು ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಸಮೀಪ ತೆಗೆದುಕೊಂಡು ಹೋಗಿ ಸ್ವಚ್ಛಗೊಳಿಸಲಾಗಿತ್ತು. ನಂತರ ಅವುಗಳನ್ನು ಕಲ್ಯಾಣ ಮಂಟಪಕ್ಕೆ ತಂದಿಟ್ಟು ಸಾಂಪ್ರದಾಯಿಕ ಪೂಜಾ ವಿಧಿಯನ್ನು ಮಧ್ಯಾಹ್ನ ೧೨.೨೦ ರಿಂದ ೧೨.೪೫ ರ ಶುಭ ಲಗ್ನದಲ್ಲಿ ಯದುವೀರ್ ನೇರವೇರಿಸಿದರು.

ಕನ್ನಡಿ ತೊಟ್ಟಿಯಲ್ಲಿ ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟ ಆನೆ ಹಾಗೂ ಅರಮನೆಯ ಹೆಣ್ಣಾನೆಗಳು ಮತ್ತು ತಾವು ಬಳಸುವ ಖಾಸಗಿ ದುಬಾರಿ ಬೆಳೆಯ ಕಾರುಗಳಿ ಅವರುಗೂ ಪೂಜೆ ಸಲ್ಲಿಸಿದರು. ಇದಾದ ನಂತರ ಕನ್ನಡಿ ತೊಟ್ಟಿಯ ಆಯುಧ ಪೂಜೆ ಮುಕ್ತಾಯವಾಯಿತು.

ಇಂದು ಸಂಜೆ ಖಾಸಗಿ ದರ್ಬಾರ್ ನಂತರ ವಾಣಿವಿಲಾಸ ದೇವರ ಮನೆಗೆ ತೆರಳಿ ಕಂಕಣ ವಿಸರ್ಜನೆ ಮಾಡಲಿದ್ದಾರೆ. ಆ ಬಳಿಕ ಅಂಬಾ ವಿಲಾಸ ದತ್ತಪೂಜೆ ಮಾಡಿ ಅಮಲಾದೇವಿ ದರ್ಶನ ಪಡೆಯುವರು. ಇದರೊಂದಿಗೆ ನವರಾತ್ರಿಯ ೯ನೇ ದಿನದ ನವಮಿ ಪೂಜಾ ಕಾರ್ಯಕ್ರಮಗಳು ಮುಕ್ತಾಯವಾಗಲಿವೆ.

RELATED ARTICLES
- Advertisment -
Google search engine

Most Popular