ಮಂಡ್ಯ: ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಕಲಾವಿದರು ಬೆಂಬಲ ಸೂಚಿಸಿದ್ದಾರೆ.
ಯಮಧರ್ಮ, ಚಿತ್ರಗುಪ್ತನ ವೇಷದಲ್ಲಿ ಆಗಮಿಸಿದ ಕೋಲಾರ ಮೂಲದ ಕಲಾವಿದರು, ವೇದಿಕೆಯಲ್ಲಿ ನೀರಿನ ವಿಚಾರವಾಗಿ ಡೈಲಾಗ್ ಹೊಡೆದರು.
ನೀರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಯಮಲೋಕಕ್ಕೆ ಕರೆದುಕೊಂಡು ಹೋಗೋಣಾ. ಭೂಲೋಕದಲ್ಲಿ ರೈತರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನೀರು ಹೋಗ್ತಿರುವುದನ್ನ ನಿಲ್ಲಿಸಿ ಧರ್ಮ ಯಮ ಧರ್ಮ ಎಂದು ಘೋಷಣೆ ಕೂಗಿದರು.