ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಯರೆಮನುಗನಹಳ್ಳಿ ವೈ.ಎಸ್. ನಟರಾಜು ಅವಿರೋಧವಾಗಿ ಆಯ್ಕೆಯಾರು.
ಈವರೆಗೆ ಅಧ್ಯಕ್ಷರಾಗಿದ್ದ ಸಿ. ಕೆ. ಜಗದೀಶ್ ಅವರ ನಿಧನದಿಂದ. ತೆರನಾಗಿದ್ದ ಸ್ಥಾನಕ್ಕೆ ಸಂಘದ ಆಡಳಿತ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ವೈ.ಎಸ್. ನಟರಾಜು ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್. ರವಿ ಆಯ್ಕೆ ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ಉಪಾಧ್ಯಕ್ಷ ಸಿ.ಎಚ್. ಕುಮಾರ್, ನಿರ್ದೇಶಕರಾದ ಸಿ.ವೈ. ಅಭಿಲಾಷ್, ಉಷಾ, ಚೆಲುವಯ್ಯ, ತಮ್ಮೇಗೌಡ, ಸಿ.ಕೆ. ಮಲ್ಲಿಕಾರ್ಜುನ, ಪುಟ್ಟೇಗೌಡ, ಎಂ.ಎಸ್., ರೂಪ ಶಂಕರ್ ನಾಯಕ, ಸೈಯದ್ ಇಸ್ರಾರ್, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಎನ್. ದಿನೇಶ್, ಸಂಘದ ಸಿ ಇ ಓ ಆರ್. ಮಂಜು, ಸಹಾಯಕರಾದ ಎಚ್. ಪಿ. ರಾಜೇಶ್, ಧನಲಕ್ಷ್ಮಿ ಇದ್ದರು.
ಅಧ್ಯಕ್ಷರಾಗಿ ಆಯ್ಕೆಯಾದ ವೈ.ಎಸ್.ನಟರಾಜು ಮಾತನಾಡಿ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರದಿಂದ ಸಂಘದ ರೈತ ಸದಸ್ಯರ ಮನೆ ಬಾಗಿಲಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ತಲುಪಿಸುವುದಾಗಿ ಭರವಸೆ ನೀಡಿದರು.
ತಮ್ಮ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ಸರ್ವ ಸದಸ್ಯರುಗಳಿಗೆ ಕೃತಜ್ಞತೆ ಸಲ್ಲಿಸಿದ ವೈ.ಎಸ್.ನಟರಾಜು ಎಲ್ಲರ ಜತೆ ಸಮನ್ವಯತೆ ಸಾಧಿಸಿ ಉತ್ತಮವಾಗಿ ಕೆಲಸ ಮಾಡುತ್ತೇನೆಂದು ತಿಳಿಸಿದರು.
ನೂತನ ಅಧ್ಯಕ್ಷರನ್ನು ಚನ್ನಂಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷೆ ಸುಕನ್ಯ ನಾಗರಾಜು, ಹನಸೋಗೆ ಗ್ರಾ.ಪಂ.ಅಧ್ಯಕ್ಷ ಹೆಚ್.ಆರ್.ಹರೀಶ್, ಮಾಜಿ ಅಧ್ಯಕ್ಷರಾದ ಹೆಚ್.ಟಿ.ರಾಜೇಶ್, ಸಿ.ಎನ್. ನಾರಾಯಣಗೌಡ, ಸಂಘದ ಮಾಜಿ ನಿರ್ದೇಶಕ ಸಿ.ಎಸ್.ನಾಗರಾಜು, ಮುಖಂಡರಾದ ಬಾಪು, ಸಿ.ಎಸ್.ರಮೇಶ್, ಮಹದೇವ್, ಸುಂದರ್, ಸುರೇಶ್, ದರ್ಮೇಗೌಡ ಮತ್ತಿತರರು ಅಭಿನಂದಿಸಿದರು.