ನಟ ಯಶ್ ಅವರ ಅಭಿಮಾನಿಗಳ ಪಾಲಿಗೆ ಇಂದು (ಜನವರಿ 8) ಹಬ್ಬ. ಏಕೆಂದರೆ ಇಂದು ಅವರ ನೆಚ್ಚಿನ ನಟನ ಬರ್ತ್ಡೇ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹಾರತುರಾಯಿಗಳ ಸಹವಾಸಕ್ಕೆ ಹೋಗದೆ ಫ್ಯಾನ್ಸ್ ಸಾಮಾಜಿಕ ಕೆಲಸಗಳ ಮೂಲಕ ಬರ್ತ್ಡೇ ಆಚರಿಸುತ್ತಿದ್ದಾರೆ. ಈ ಮಧ್ಯೆ ಯಶ್ ಅವರ ಬರ್ತ್ಡೇನ ಆಪ್ತರ ಜೊತೆ ಆಚರಿಸಿಕೊಂಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯಶ್ ಅವರು ಸಿನಿಮಾ ಕೆಲಸಗಳಿಂದ ಹುಟ್ಟುಹಬ್ಬದ ದಿನ ಊರಿನಲ್ಲಿ ಇರೋದಿಲ್ಲ ಎಂದು ಈ ಮೊದಲೇ ಹೇಳಿದ್ದರು. ಅವರು ಗೋವಾದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಯೇ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಅಲ್ಲಿ ಆಪ್ತರು ಹಾಗೂ ಕುಟುಂಬದವರ ಜೊತೆ ಯಶ್ ಅವರು ಬರ್ತ್ಡೇ ಆಚರಿಸಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.
ಯಶ್ ಅವರ ಜೊತೆ ‘ಟಾಕ್ಸಿಕ್’ ಚಿತ್ರದ ನಿರ್ಮಾಪಕ ವೆಂಕಟ್ ನಾರಾಯಣ್, ಯಶ್ ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಕೂಡ ಇದ್ದಾರೆ. ಈ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಈ ಬಾರಿ ಯಶ್ ಅವರು ಅಭಿಮಾನಿಗಳ ಜೊತೆ ಇರಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.