Sunday, April 20, 2025
Google search engine

Homeಸಿನಿಮಾಯಶ್ ಹೊಸ ಸಿನಿಮಾ ಟೈಟಲ್ ‘ಟಾಕ್ಸಿಕ್’: 2025ರ ಏಪ್ರಿಲ್ 10ಕ್ಕೆ ರಿಲೀಸ್

ಯಶ್ ಹೊಸ ಸಿನಿಮಾ ಟೈಟಲ್ ‘ಟಾಕ್ಸಿಕ್’: 2025ರ ಏಪ್ರಿಲ್ 10ಕ್ಕೆ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿ ಕಾತುರದಿಂದ ಕಾಯುತ್ತಿದ್ದ ‘ಯಶ್ 19’ ಸಿನಿಮಾದ ದೊಡ್ಡ ಅಪ್ ಡೇಟ್ ರಿವೀಲ್ ಆಗಿದೆ. ಹೊಸ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 ‘ಯಶ್ 19’ ಚಿತ್ರಕ್ಕೆ ‘ಟಾಕ್ಸಿಕ್’ ಎಂದು ಟೈಟಲ್ ಇಡಲಾಗಿದೆ. ಈ ಟೈಟಲ್ ನೊಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋ ಕಾರಣಕ್ಕೆ ಈ ಚಿತ್ರಕ್ಕೆ ಟೈಟಲ್ ಸೂಕ್ತ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಯಶ್ ಅವರ ‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್​ನಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡವು. ನರ್ತನ್ ಅವರು ‘ಯಶ್ 19’ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ನಡೆಯಲಿಲ್ಲ. ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ‘ಕೆಜಿಎಫ್ 2’ ರಿಲೀಸ್ ಆಗಿ ಒಂದೂವರೆ ವರ್ಷದ ಬಳಿಕ ಯಶ್ ಹೊಸ ಚಿತ್ರದ ಟೈಟಲ್ ಘೋಷಣೆ ಆಗಿದೆ.

 ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ನೋಡಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ ದಿನಾಂಕವನ್ನೂ ರಿವೀಲ್ ಮಾಡಲಾಗಿದೆ. 2025ರ ಏಪ್ರಿಲ್ 10ಕ್ಕೆ ಸಿನಿಮಾ ಥಿಯೇಟರ್ ​ನಲ್ಲಿ ರಿಲೀಸ್ ಆಗಲಿದೆ.

ಟ್ವಿಟರ್ ​ನಲ್ಲಿ ಸದ್ಯ #Toxic ಹ್ಯಾಶ್​ಟ್ಯಾಗ್ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ.

RELATED ARTICLES
- Advertisment -
Google search engine

Most Popular