ಮೈಸೂರು : ನೀರಾವರಿ ಇಲಾಖೆ ಅಧಿಕಾರಿಗೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಕ್ಲಾಸ್ ತೆಗೆದು ಕೊಂಡಿದ್ದು, ಫೋನಿನಲ್ಲೇ ಅಧಿಕಾರಿಗೆ ಬೆವರಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮೈಸೂರು ಜಿಲ್ಲೆಯ ವರುಣ ಕ್ಷೇತ್ರ ವ್ಯಾಪ್ತಿಯ ಹನುಮನಪುರ ಗ್ರಾಮದಲ್ಲಿ ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ವಿಫಲರಾದ ಹಿನ್ನೆಲೆ ಅಧಿಕಾರಿಗಳಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರ ಬಳಿ ರೈತರು ಸಮಸ್ಯೆ ಹೇಳಿಕೊಂಡರು. ಕೂಡಲೇ ಅಧಿಕಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಯತೀಂದ್ರ ಸಿದ್ದರಾಮಯ್ಯ, ಏನ್ ಆಟ ಆಡ್ತಿದ್ದೀರಾ? ಸಿಎಂ ಕ್ಷೇತ್ರದಲ್ಲೇ ಹೀಗಾದ್ರೆ ಬೇರೆ ಕಡೆ ಹೇಗೆ ಕೆಲಸ ಮಾಡ್ತೀರಾ? ಜನಸಂಪರ್ಕ ಸಭೆ ಸುಮ್ಮನೆ ಮಾಡ್ತಿದ್ದೀವಾ? ಎಂದು ಕೂಡಲೇ ಈ ಸಂಬಂಧ ನಿರ್ಲಕ್ಷ್ಯ ಮಾಡಿದ ಅಧಿಕಾರಿ ಮೇಲೆ ಕ್ರಮ ಆಗಬೇಕು ಎಂದು ಹಿರಿಯ ಅಧಿಕಾರಿಗೆ ಗದರಿದ್ದಾರೆ ಎನ್ನಲಾಗಿದೆ.



