Saturday, April 19, 2025
Google search engine

Homeಸ್ಥಳೀಯಸಿಎಂ ಪತ್ನಿ ಪಾರ್ವತಿ ಬರೆದ ಪತ್ರ ಮುಡಾ ಆಯುಕ್ತರಿಗೆ ಸಲ್ಲಿಸಿದ ಯತೀಂದ್ರ

ಸಿಎಂ ಪತ್ನಿ ಪಾರ್ವತಿ ಬರೆದ ಪತ್ರ ಮುಡಾ ಆಯುಕ್ತರಿಗೆ ಸಲ್ಲಿಸಿದ ಯತೀಂದ್ರ

ಮೈಸೂರು: ಮುಡಾದಿಂದ ನೀಡಲಾದ 14 ಬದಲಿ ನಿವೇಶನಗಳನ್ನು ವಾಪಸ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಬರೆದ ಪತ್ರವನ್ನು ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮುಡಾ ಆಯುಕ್ತರಿಗೆ ಸಲ್ಲಿಸಿದ್ದಾರೆ‌.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮುಡಾ ಆಯುಕ್ತ ರಘುನಂದನ್ ‘ಪಾರ್ವತಿ ಅವರ ಪರವಾಗಿ ಡಾ. ಯತೀಂದ್ರ ಪತ್ರವನ್ನು ನೀಡಿದ್ದಾರೆ. ಈ ಕುರಿತು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಜರುಗಿಸುತ್ತೇವೆ’ ಎಂದರು.

ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ಕ್ಕೆ ಸಂಬಂಧಿಸಿ ಲೋಕಾಯುಕ್ತ ಪೊಲೀಸರು ಕೆಲವು ದಾಖಲೆಗಳನ್ನು ಕೇಳಿದ್ದು, ತನಿಖೆಗೆ ಸಹಕಾರ ನೀಡುತ್ತಿದ್ದೇವೆ. ಇ.ಡಿ‌. ಯಿಂದ ಈವರೆಗೆ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದರು.

RELATED ARTICLES
- Advertisment -
Google search engine

Most Popular