Friday, April 11, 2025
Google search engine

Homeರಾಜ್ಯಸುದ್ದಿಜಾಲಎಐ ಮೂಲಕ ಯತಿಕಾರ್ಪ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ರಾಜ್ಯಾದ್ಯಂತ ಉದ್ಯೋಗ ಕ್ರಾಂತಿ ಸೃಷ್ಟಿ: ಯತೀಶ್ ಕೆ.ಎಸ್

ಎಐ ಮೂಲಕ ಯತಿಕಾರ್ಪ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ರಾಜ್ಯಾದ್ಯಂತ ಉದ್ಯೋಗ ಕ್ರಾಂತಿ ಸೃಷ್ಟಿ: ಯತೀಶ್ ಕೆ.ಎಸ್

ಮಂಗಳೂರು (ದಕ್ಷಿಣ ಕನ್ನಡ): ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಯತಿಕಾರ್ಪ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಮೂಲಕ ರಾಜ್ಯಾದ್ಯಂತ ಉದ್ಯೋಗ ಕ್ರಾಂತಿ ಸೃಷ್ಟಿಸುತ್ತಿದೆ ಎಂದು ಸಂಸ್ಥೆಯ ಸ್ಥಾಪಕ ಹಾಗೂ ಕಾರ್ಯನಿರ್ವಹಣಾಧಿಕಾರಿ ಯತೀಶ್ ಕೆ.ಎಸ್. ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಅನ್ನು ರಾಜ್ಯದ ಜನರಿಗೆ ಪರಿಚಯಿಸುವ ಅತೀ ದೊಡ್ಡ ಯೋಜನೆಯಲ್ಲಿ ಯುವಕ/ತಿಯರಿಗೆ ರಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಇದು ಸುವರ್ಣಾವಕಾಶ ಎಂದೇ ಹೇಳಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲೋಕದಲ್ಲಿ ಹೊಸತನದ ಜೊತೆಗೆ ವಿಭಿನ್ನ ಅನುಭವವನ್ನು ಪಡೆದುಕೊಳ್ಳಲು ಒಟ್ಟು 1,020 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ.

ಉದ್ಯೋಗಿಗಳಿಗೆ ತಿಂಗಳಿಗೆ ರೂ. 25,000 ರಿಂದ ರೂ. 30,000 ದವರೆಗಿನ ವೇತನವನ್ನು ಪಡೆದುಕೊಳ್ಳಲಿದ್ದಾರೆ.
ಪ್ರತಿ ತಾಲೂಕಿನಿಂದ ಕ್ರಮವಾಗಿ ನಾಲ್ವರನ್ನು ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲ 6 ತಿಂಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನ ಬಗ್ಗೆ ಜಾಗೃತಿ ಮೂಡಿಸಲು ಆಯ್ಕೆ ಯಾದ ಅಭ್ಯರ್ಥಿಗಳು ಫೀಲ್ಡ್ ನಲ್ಲಿದ್ದು ಕಾರ್ಯ ನಿರ್ವಹಿಸಲು ಸಿದ್ಧವಿರಬೇಕು. ಫೀಲ್ಡ್ ನಲ್ಲಿ ಕೆಲಸ ನಿರ್ವಹಿಸಿ ಅನುಭವ ಪಡೆದುಕೊಂಡ ಬಳಿಕ ಅವರನ್ನು ಸಂಸ್ಥೆಯ ಖಾಯಂ ಉದ್ಯೋಗಿಯಾಗಿ ಕಚೇರಿಗೆ ನೇಮಿಸಲಾಗುತ್ತದೆ ಎಂದು ಹೇಳಿದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ ನಾಲ್ಕು ಮಂದಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ದ.ಕ ಜಿಲ್ಲೆಯ ಸಂದರ್ಶನ ಫೆ.12ರಂದು ನಗರದ ಸೈಂಟ್ ಅಲೋಶಿಯಸ್ ಕಾಲೇಜ್‌ನಲ್ಲಿ ನಡೆಯಲಿದೆ. ಉಡುಪಿ ಜಿಲ್ಲೆಗೆ ಸಂಬಂಧಿಸಿ ಫೆ.13ರಂದು ಮಣಿಪಾಲ ಯುನಿವರ್ಸಿಟಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ ಎಂದರು.

ಆಯ್ಕೆ ಪ್ರಕ್ರಿಯೆ 4 ಹಂತಗಳಲ್ಲಿ ನಡೆಯಲಿದೆ. ಅಪ್ಟಿಟ್ಯೂಡ್ ಟೆಸ್ಟ್, ಗ್ರೂಪ್ ಡಿಸ್ಕಷನ್, ಟೆಕ್ನಿಕಲ್ ರೌಂಡ್, ಎಚ್‌ಆರ್ ರೌಂಡ್ ವಿಭಾಗಗಳಲ್ಲಿ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 6 ತಿಂಗಳ ಕಾಲ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು ಫೀಲ್ಡ್‌ನಲ್ಲಿದ್ದು, ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಫೀಲ್ಡ್‌ನಲ್ಲಿ ಕೆಲಸ ನಿರ್ವಹಿಸಿ ಅನುಭವ ಪಡೆದು ಕೊಂಡ ಬಳಿಕ ಅವರನ್ನು ಸಂಸ್ಥೆಯ ಖಾಯಂ ಉದ್ಯೋಗಿಯಾಗಿ ನೇಮಿಸಲಾಗುತ್ತದೆ. ಆಕರ್ಷಕ ವೇತನವನ್ನೂ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 7349740777 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಯತೀಶ್ ಕೆ.ಎಸ್ ತಿಳಿಸಿದರು.

RELATED ARTICLES
- Advertisment -
Google search engine

Most Popular