Wednesday, April 23, 2025
Google search engine

Homeಸ್ಥಳೀಯಯತೀಂದ್ರ ಅವರಿಗೆ ಸಚಿವ ಸ್ಥಾನ ಸಿಗಬೇಕು

ಯತೀಂದ್ರ ಅವರಿಗೆ ಸಚಿವ ಸ್ಥಾನ ಸಿಗಬೇಕು


ಮೈಸೂರು: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಶಾಸಕ ಕೆ.ಹರೀಶ್ ಗೌಡ ಪಕ್ಷಕ್ಕೆ ಮನವಿ ಮಾಡಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಕನ್ನಡ ಸ್ನೇಹ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮೈಸೂರಿನ ಅಭಿವೃದ್ಧಿಗೆ ಸಮರ್ಥ ನಾಯಕತ್ವದ ಅಗತ್ಯವಿದೆ. ಯತೀಂದ್ರ ಅವರಲ್ಲಿ ಆ ಸಾಮರ್ಥ್ಯವಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಚಾಮರಾಜ ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಮತದಾರರು ಎಷ್ಟು ಸಹಕಾರ ನೀಡಿzರೋ ಅಷ್ಟೇ ಸಹಕಾರವನ್ನು ಯತೀಂದ್ರ ಸಿದ್ದರಾಮಯ್ಯ ನೀಡಿzರೆ. ಅವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಜನಪರ ಸೇವೆಯ ಆಕಾಂಕ್ಷೆಗೆ ಭರವಸೆಯಾಗಿದ್ದರು ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಡಾ.ಕೆ.ಕಾಳಚನ್ನೇಗೌಡ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯ ಮತ್ತು ನಗರದ ಸರ್ಕಾರಿ ಶಾಲಾ ಕಾಲೇಜುಗಳು ಉಪನ್ಯಾಸಕರ ಕೊರತೆ ಎದುರಿಸುತ್ತಿವೆ. ಅತಿಥಿ ಉಪನ್ಯಾಸಕರ ನೇಮಕಾತಿ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ತಡವಾಗಿ ಪ್ರವೇಶಾತಿ ಕೈಗೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರಗತಿಗೆ ಮಾರಕವಾಗಿ ಪರಿಣಮಿಸಿದೆ. ಈ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಶಾಸಕ ಕೆ.ಹರೀಶ್ ಗೌಡ ಅವರಿಗೆ ಬೆಳ್ಳಿ ಕಿರೀಟ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾವಲು ಪಡೆಯ ಅಧಕ್ಷ ಎಂ.ಮೋಹನ್ ಕುಮಾರ್ ಗೌಡ, ಜಿ ಪತ್ರಕರ್ತರ ಸಂಘದ ಅಧಕ್ಷ ಎಸ್.ಟಿ.ರವಿಕುಮಾರ್, ಸಾಹಿತಿ ಟಿ.ಸತೀಶ್ ಜವರೇಗೌಡ ಜೆಪಿಎನ್ ಪ್ರಾಪರ್ಟೀಸ್ ಡೆವೆಲಪರ್ ಪಿ.ನಾಗೇಂದ್ರ, ವೈಷ್ಣವಿ ಸ್ವೀಟ್ ಮಾಲೀಕ ಜಿ.ನವೀನ್, ಕನ್ನಡ ಸ್ನೇಹ ಬಳಗದ ಅಧ್ಯಕ್ಷ ಪಿ.ಬಂದಿಗೌಡ, ಪ್ರಮುಖರಾದ ರಮೇಶ್ ರಾಜಕುಮಾರ್, ಸಿ.ಬಾಲಚಂದ್ರ, ಆರ್.ರಮೇಶ್ ಪುಟ್ಟೇಗೌಡ, ಬಾಲು, ಲೋಕೇಶ್, ಎಸ್.ಮಾದಪ್ಪ, ಪೈಲ್ವಾನ್ ಎನ್.ಮಹದೇವು ಇದ್ದರು.

RELATED ARTICLES
- Advertisment -
Google search engine

Most Popular