Monday, December 2, 2024
Google search engine

Homeರಾಜ್ಯಯತ್ನಾಳ್ ಅವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಬಂದಿದೆ: ಸಚಿವ ಈಶ್ವರ್ ಖಂಡ್ರೆ

ಯತ್ನಾಳ್ ಅವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಬಂದಿದೆ: ಸಚಿವ ಈಶ್ವರ್ ಖಂಡ್ರೆ

ಬೀದರ್: ಯತ್ನಾಳ್ ಒಬ್ಬ ಜೋಕರ್, ಮಾನಸಿಕ ರೋಗಿಯಾಗಿದ್ದು ಅವರು ಮಾನಸಿಕ ತಜ್ಞರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳೋದು ಸೂಕ್ತ. ಅವರಿಗೆ ವಿನಾಶಕಾಲೇ ವಿಪರೀತ ಬುದ್ಧಿ ಬಂದಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಅವರು ಬಸವಣ್ಣ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ರಣಹೇಡಿ ಎಂಬಂತೆ ಬಿಂಬಿಸುತ್ತಿದ್ದಾರೆ. ಆರ್‌ಎಸ್‌ಎಸ್ ಮನವೊಲಿಸಲು ಈ ರೀತಿ ಹೇಳಿಕೆಗಳನ್ನು ಅವರು ನೀಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಸ್ವಾರ್ಥ, ಪಕ್ಷದ ಆಂತರಿಕ ಕಲಹಕ್ಕಾಗಿ ಅವರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ. ಯತ್ನಾಳ್ ಹೇಳಿಕೆ ಬಸವ ಅನುಯಾಯಿಗಳಿಗೆ ತೀವ್ರ ನೋವಾಗಿದೆ. ಬಸವಣ್ಣ ನಮ್ಮೆಲ್ಲರ ಆರಾಧ್ಯ ದೈವ. ಅವರ ಕುರಿತಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿಯವರಿಗೆ ಬಸವಣ್ಣನವರ ಅನುಯಾಯಿಗಳ ಮತ ಬೇಕು. ಆದರೆ ಲಘುವಾಗಿ ಮಾತನಾಡಿರುವ ಯತ್ನಾಳ್ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಯತ್ನಾಳ್ ಮೂಲಕ ಬಸವಣ್ಣನವರಿಗೆ ಅವಮಾನ ಮಾಡಲು ಬಿಜೆಪಿ ಅವರನ್ನು ಚೂ ಬಿಟ್ಟಿದೆ ಎಂದು ಆರೋಪ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular