Thursday, January 22, 2026
Google search engine

Homeವಿದೇಶಯಸ್‌‍ ನಾನು ಸರ್ವಾಧಿಕಾರಿ : ಡೊನಾಲ್ಡ್‌ ಟ್ರಂಪ್

ಯಸ್‌‍ ನಾನು ಸರ್ವಾಧಿಕಾರಿ : ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್‌ : ಯಸ್‌‍ ನಾನು ಸರ್ವಾಧಿಕಾರಿ ಏನೀವಾಗ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೊಂಡಿದ್ದಾರೆ. ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಹಲವು ಸಂದರ್ಭಗಳಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದ್ದು, ಇದೀಗ ಟ್ರಂಪ್‌ ಸ್ವತಃ ತಮ್ಮನ್ನು ಸರ್ವಾಧಿಕಾರಿ ಎಂದು ಕರೆದುಕೊಂಡಿದ್ದಾರೆ.

ದಾವೋಸ್‌‍ನಲ್ಲಿ ಜಾಗತಿಕ ಆರ್ಥಿಕ ವೇದಿಕೆ ಉದ್ದೇಶಿಸಿ ಮಾತನಾಡುವಾಗ ಟ್ರಂಪ್‌ ಹೇಳಿಕೆ ಎಲ್ಲರ ಗಮನ ಸೆಳೆದಿದ್ದು ಈ ವೇಳೆ ಟ್ರಂಪ್‌ ತಮ್ಮನ್ನು ಸರ್ವಾಧಿಕಾರಿಯಂದು ಕರೆದುಕೊಂಡಿದ್ದಷ್ಟೇ ಅಲ್ಲದೆ, ಯಾವಾಗಲೂ ಅಲ್ಲದಿದ್ದರೂ ಕೆಲವೊಮ್ಮೆ ಸರ್ವಾಧಿಕಾರಿಯಾಗುವುದು ಅವಶ್ಯಕ ಎಂದು ಹೇಳಿದ್ದಾರೆ.

ಇನ್ನೂ ಇದೆ ವೇಳೆ ಟ್ರಂಪ್‌ ತಮ್ಮ ಭಾಷಣಕ್ಕೆ ಬಂದ ಪ್ರತಿಕ್ರಿಯೆಯ ಬಗ್ಗೆ ಚರ್ಚಿಸುತ್ತಿದ್ದರು, ತಮ್ಮ ಭಾಷಣಕ್ಕೆ ಬಂದ ಸಕಾರಾತ್ಮಕ ಪ್ರತಿಕ್ರಿಯೆಯಿಂದ ತಮಗೆ ಆಶ್ಚರ್ಯವಾಯಿತು ಎಂದರು. ನಮಗೆ ಉತ್ತಮ ವಿಮರ್ಶೆಗಳು ಬಂದವು. ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ.

ಟ್ರಂಪ್‌ ತಮ್ಮ ನಿರ್ಧಾರಗಳು ಯಾವುದೇ ಸಿದ್ಧಾಂತದಿಂದಲ್ಲ, ಬದಲಾಗಿ ಸಾಮಾನ್ಯ ಜ್ಞಾನದಿಂದ ಬಂದಿವೆ . ಇದು ಸಂಪ್ರದಾಯವಾದಿಯೂ ಅಲ್ಲ ಅಥವಾ ಉದಾರವಾದಿಯೂ ಅಲ್ಲ. ಇದು ಸುಮಾರು 95 ಪ್ರತಿಶತ ಸಾಮಾನ್ಯ ಜ್ಞಾನವನ್ನು ಆಧರಿಸಿದೆ ಎಂದರು. ಟ್ರಂಪ್‌ ಈ ಹಿಂದೆ ತಮ್ಮ ಭಾಷೆ ಕೆಲವೊಮ್ಮೆ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂದು ಒಪ್ಪಿಕೊಂಡಿದ್ದರು. ಆದರೆ ಅವರ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಟ್ರಂಪ್‌ ಗ್ರೀನ್‌ಲ್ಯಾಂಡ್‌ಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಯನ್ನು ನೀಡಿದ್ದು, ಇತ್ತೀಚಿನ ವಾರಗಳಲ್ಲಿ ಅವರ ಬಲವಾದ ಹೇಳಿಕೆಗಳು ಮಿತ್ರರಾಷ್ಟ್ರಗಳನ್ನು ಕೆರಳಿಸಿದ್ದವು. ಆದರೆ ಈಗ ಟ್ರಂಪ್‌ ಅವರು ಮಿಲಿಟರಿ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಒತ್ತಡ ಹೇರಲು ಸುಂಕಗಳನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಎಲ್ಲರೂ ಸಂತೋಷಪಡುವ ಒಪ್ಪಂದವಾಗಿದ್ದು, ಇದು ದೀರ್ಘಾವಧಿಯ ಒಪ್ಪಂದವಾಗಿದೆ. ಟ್ರಂಪ್‌ ಇದನ್ನು ಶಾಶ್ವತ ಒಪ್ಪಂದ ಎಂದು ಕರೆದಿದ್ದಾರೆ. ಡೆನ್ಮಾರ್ಕ್‌, ಗ್ರೀನ್‌ಲ್ಯಾಂಡ್‌‍ ಮತ್ತು ಯುನೈಟೆಡ್‌ ಸ್ಟೇಟ್ಸ್‌ ನ ನಡುವಿನ ಮಾತುಕತೆಗಳು ಮುಂದುವರೆಯುತ್ತವೆ, ಇದರಿಂದಾಗಿ ರಷ್ಯಾ ಮತ್ತು ಚೀನಾ ಗ್ರೀನ್‌ಲ್ಯಾಂಡ್‌‍ ಮೇಲೆ ಎಂದಿಗೂ ಆರ್ಥಿಕ ಅಥವಾ ಮಿಲಿಟರಿ ನಿಯಂತ್ರಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular