ಮೈಸೂರು: ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ೯ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಅರಿವು ಮೂಡಿಸಲು ಯೋಗ ಮಾಡೋಣ ಆರೋಗ್ಯ ಪಡೆಯೋಣ ಎಂಬ ಬೀದಿನಾಟಕವನ್ನು ನಗರದ ವಿಶ್ವೇಶ್ವರಯ್ಯ (ಆಯುರ್ವೇದಿಕ್ ಕಾಲೇಜ್) ವೃತ್ತದಲ್ಲಿ ಮಂಗಳವಾರ ಪ್ರದರ್ಶಿಸಲಾಯಿತು.
ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ರಾಮರಾವ್ ಮಾತನಾಡಿ, ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಯೋಗದ ಅರಿವು ಮೂಡಿಸಲು ಈ ಬೀದಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಅಂತಾರಾಷ್ಟ್ರೀಯ ವೆಬಿನಾರ್‌ನಿಂದ ಆರಂಭಿಸಿ ಹುಣಸೂರು ತಾಲೂಕಿನ ಕೊಳವಿಗೆ ಹಾಡಿಯವರೆಗೆ ಯೋಗಾಸನದ ಮಹತ್ವ ಹಾಗೂ ಅರಿವನ್ನು ಯಾವ ಯಾವ ಕಾರ್ಯಕ್ರಮದ ಮೂಲಕ ತಲುಪಿಸಲಾಯಿತು ಎಂದು ಅವರು ವಿವರಿಸಿದರು.
ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿ ಡಾ.ಎಚ್.ಎ.ಶಶಿರೇಖ, ಸಂಘಟನಾ ಕಾರ್ಯದರ್ಶಿ ಡಾ.ಕೆ.ವಿ.ವೆಂಕಟಕೃಷ್ಣ, ಡಾ.ಸುಧೀಂದ್ರ ನವಲೆ, ಡಾ.ಪ್ರವೀಣ್‌ಕುಮಾರ್, ಸ್ವಸ್ಥವೃತ್ತ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಇತರೆ ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.