Sunday, April 20, 2025
Google search engine

Homeರಾಜಕೀಯಮಂಡ್ಯದಲ್ಲಿ ಯೋಗ ದಿನಾಚರಣೆ: ಭಾರತ ದೇಶ ಯೋಗದದಲ್ಲಿ ಒಂದು ಗುರುವಿನ ಸ್ಥಾನ ಪಡೆದಿದೆ- ಡಾ.ಕುಮಾರ್

ಮಂಡ್ಯದಲ್ಲಿ ಯೋಗ ದಿನಾಚರಣೆ: ಭಾರತ ದೇಶ ಯೋಗದದಲ್ಲಿ ಒಂದು ಗುರುವಿನ ಸ್ಥಾನ ಪಡೆದಿದೆ- ಡಾ.ಕುಮಾರ್

10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಜಿಲ್ಲಾಡಳಿತ, ಜಿ.ಪಂ, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ  ಸಕ್ಕರೆ ನಾಡು ಮಂಡ್ಯದಲ್ಲಿ ಯೋಗ ದಿನಾಚರಣೆ ನಡೆಯಿತು.

ತನಗಾಗಿ, ಸಮಾಜದ ಸ್ವಾಸ್ತ್ಯಕ್ಕಾಗಿ, ಮಹಿಳಾ ಸಬಲೀಕರಣಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಮಂಡ್ಯ ನಗರದ ಪಿಇಟಿ  ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ‌ ನಡೆಸಲಾಯಿತು.

ಬೇಬಿ ಮಠದ ಪೀಠಾಧ್ಯಕ್ಷರಾದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಜೀ, ಆದಿಚುಂಚನಗಿರಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಡಿಸಿ ಡಾ. ಕುಮಾರ, ಎಸ್ಪಿ ಎನ್.ಯತೀಶ್, ಸಿಇಓ ಯೋಗಾ ಪಂತಜಲಿ ಮಹರ್ಷಿ ಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಯೋಗ ಡೇ ಗೆ ಚಾಲನೆ‌‌ ನೀಡಲಾಯಿತು.

ನಂತರ ಅಧಿಕಾರಿಗಳು ಹಾಗೂ ಗಣ್ಯರು ವೇದಿಕೆ ಮೇಲೆ ವಿವಿಧ ಬಗೆಯ ಯೋಗ ಪ್ರದರ್ಶನ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ‌.ಕುಮಾರ, ಭಾರತ ದೇಶ ಯೋಗದ ವಿಷಯದಲ್ಲಿ ಒಂದು ಗುರುವಿನ ಸ್ಥಾನ ಪಡೆದಿದೆ‌‌. ನಮ್ಮ ದೇಶದ ಸಂಸ್ಕೃತಿ  ಮಹತ್ತರವಾದಂತಹ ಕೊಡುಗೆಯನ್ನು ಕೊಟ್ಟಿದೆ. ಹಾಗಾಗಿ ಯೋಗ ಅನ್ನುವಂಥದ್ದು ಪ್ರತಿಯೊಬ್ಬ ಮನುಷ್ಯನ ಒಂದು ಅವಿಭಾಜ್ಯ ಅಂಗ ಆಗಬೇಕು‌‌‌. ಅದು ಒಂದು ಜೀವನದ ಕ್ರಮ ಆಗಬೇಕು ಅನ್ನೋದು ನನ್ನ ಅಭಿಮತ. ಯೋಗ ಅಂದರೆ ಅದೊಂದು ಧರ್ಮ ಅಲ್ಲ ಅದು ನಿಜವಾಗಲೂ ಒಂದು ಮಾನವ ಧರ್ಮ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಬದುಕಿನಲ್ಲಿ ಯೋಗ ಅಭ್ಯಾಸವನ್ನು ಅಳವಡಿಸಿಕೊಳ್ಳಿ‌‌. ದೇಹ ಮತ್ತು ಮನಸ್ಸನ್ನು ಎರಡನ್ನು ಕೂಡ ಸಮಸ್ಥಿತಿಯಲ್ಲಿ ಇಟ್ಟುಕೊಳ್ಳುವ ಮೂಲಕ ಈ ಸಮಾಜಕ್ಕೆ ಆದರ್ಶ ಸತ್ಪ್ರಜೆಗಳಾಗಲು ಸಾಧ್ಯ. ಯೋಗವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ಪಿ ಎನ್. ಯತೀಶ್, ಜಿ‌‌‌.ಪಂ.ಸಿಇಓ ಶೇಕ್ ತನ್ವಿರ್ ಆಸೀಫ್, ಎಡಿಸಿ ಡಾ. ಹೆಚ್.ಎಲ್.ನಾಗರಾಜು. ಆಯುಷ್ ಇಲಾಖೆ ಅಧಿಕಾರಿ ಡಾ. ಸೀತಾಲಕ್ಷ್ಮಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular