Friday, April 18, 2025
Google search engine

Homeಸ್ಥಳೀಯಯೋಗ ಮನುಷ್ಯ ಜೀವನದ ಅವಿಭಾಜ್ಯ ಅಂಗ : ಡಾ. ಕೆ.ಎಸ್. ರವೀಂದ್ರನಾಥ್

ಯೋಗ ಮನುಷ್ಯ ಜೀವನದ ಅವಿಭಾಜ್ಯ ಅಂಗ : ಡಾ. ಕೆ.ಎಸ್. ರವೀಂದ್ರನಾಥ್

ಮೈಸೂರು: ಯೋಗ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದು ಪ್ರತಿಯೊಬ್ಬರು ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ತಿಳಿಸಿದರು.

ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆ, ಮೈಸೂರು ಹಾಗೂ ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಕಾರ್ಡಿಯೋ ಯೋಗ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಬದಲಾದ ಜೀವನಶೈಲಿಯಿಂದ ಹೃದಯರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಹಿಂದೆ ಪಟ್ಟಣದಲ್ಲಿ ವಾಸಮಾಡುವರಿಗೆ ಹೃದಯ ಕಾಯಿಲೆ ಹೆಚ್ಚಾಗಿ ಬರುತ್ತಿತ್ತು. ಆದರೆ ಈಗ ಗ್ರಾಮೀಣ ಭಾಗದ ಜನರಿಗೆ ಹಾಗೂ ಯುವಕರಲ್ಲಿಯೂ ಹೃದಯರೋಗ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ೨೦೧೪ ರಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಾರತದಲ್ಲಿ ಆಚರಿಸಲಾಯಿತು.

ಇತ್ತೀಚೆಗೆ ಯೋಗ ಮಾಡುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಮನುಷ್ಯನಿಗೆ ಒತ್ತಡದಿಂದಲೇ ಹೆಚ್ಚು ಕಾಯಿಲೆಗಳು ಬರುತ್ತವೆ. ಡಾ. ರಾಜ್‌ಕುಮಾರ್ ಸಹ ಉತ್ತಮ ಯೋಗಪಟುವಾಗಿದ್ದರು. ಮನುಷ್ಯ ದೈಹಿಕವಾಗಿ ಮಾನಸಿಕವಾಗಿ ಸದೃಡವಾಗಿರಬೇಕಾದರೆ ಯೋಗ ಉತ್ತಮ ಸಾಧನೆ, ಮಹರ್ಷಿ ಪತಂಜಲಿ ಸ್ವಾಮಿ ವಿವೇಕಾನಂದರ ಕೊಡುಗೆ ಯೋಗಕ್ಕೆ ಅಪಾರವಾಗಿದೆ. ದೇಹದ ಎಲ್ಲಾ ಅಂಗಾಂಗಳನ್ನು ಯೋಗದಿಂದ ಉಪಯೋಗವೆದೆ ಎಂದ ಅವರು ಇಂತಹ ಕಾರ್ಯಗಾರಗಳು ಆಗಾಗ್ಗೆ ನಡೆಯಬೇಕು ಎಂದರು.

ಸಮಾರಂಭದಲ್ಲಿ ಆಯುಷ್ ಇಲಾಖೆಯ ಆಯುಕ್ತರಾದ ಡಾ. ಶ್ರೀನಿವಾಸಲು ಆದಿಚುಂಚನಗಿರಿ ವಿ.ವಿ.ಯ ಕುಲಪತಿ ಡಾ. ಎಂ.ಎ. ಶೇಖರ್, ಮೈಸೂರು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್, ಡಾ. ಸೀತಾಲಕ್ಷ್ಮೀ, ಡಾ. ಎಂಜಲ್‌ರಾಜ್, ಡಾ. ಎಲ್.ಎನ್. ಶೆಣೈ, ಡಾ. ಗುರು ಬಸವರಾಜು, ಡಾ. ವೇದಾವತಿ, ಡಾ. ವೀಣಾನಂಜಪ್ಪ, ಡಾ. ಸಂತೋಷ್, ಡಾ. ರಾಜೀವ್, ಡಾ. ಪ್ರಭಾವತಿ, ಡಾ. ವಾದಿರಾಜು, ಡಾ. ಮಂಜುನಾಥ್, ಡಾ. ದೇವರಾಜ್, ಹರೀಶ್‌ಕುಮಾರ್ ನಾಗಮೋಹನ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular