ಬೆಂಗಳೂರು : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿ ಪರವಾಗಿ ನಾಳೆ ಬುಧವಾರ ಕರ್ನಾಟಕದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಕಾರ್ಯವನ್ನು ರದ್ದುಪಡಿಸಲಾಗಿದೆ. ಬೆಂಗಳೂರು, ಉಡುಪಿ ಹಾಗೂ ಮಡಿಕೇರಿಯಲ್ಲಿ ಯೋಗಿ ಆದಿತ್ಯನಾಥ್ ಪ್ರಚಾರ ಭಾಷಣ ಹಾಗೂ ರೋಡ್ ಶೋ ನಿಗದಿಯಾಗಿತ್ತು. ಬಿಜೆಪಿ ಸ್ಟಾರ್ ಪ್ರಚಾರಕರಾದ ಯೋಗಿ ಆದಿತ್ಯನಾಥ್ ಕರ್ನಾಟಕ ಪ್ರವಾಸ ಈಗ ಧಿಡೀರನೆ ರದ್ದಾಗಿದೆ.
ಕರ್ನಾಟಕ ಪ್ರವಾಸ ರದ್ದತಿಗೆ ಯಾವುದೇ ಕಾರಣ ನೀಡಿಲ್ಲ. ಲೋಕಸಭಾ ಚುನಾವಣೆಗೆ ಇನ್ನು ದಿನಗಣನೆಯಷ್ಟೇ ಬಾಕಿ ಉಳಿದಿದ್ದು, ನಾಳೆಗೆ ಪ್ರಚಾರ ಕಾರ್ಯ ಅಂತ್ಯಗೊಳ್ಳಲಿದೆ.