ಮದ್ದೂರು: ಸರ್ಕಾರ ನಮ್ಮದ್ದಿದ್ದರೂ ಕೂಡ ನೀವು ಮಾತನಾಡುವುದಿಲ್ಲ. ಜೆಡಿಎಸ್ ಕಾರ್ಯಕರ್ತರು ಸೋತಿದ್ದರು ಕೂಡ ಸೋಲನ್ನು ಒಪ್ಪಿಕೊಳ್ಳದೆ ಮೀಸೆ ತಿರುಗುತ್ತಾರೆ. ನಮ್ಮ ಕಾರ್ಯಕರ್ತರಾದ ನೀವು ಮೀಸೆ ತಿರುಗಲು ಹಿಂಜರಿಯುತ್ತೀರಿ. ಆ ಶಕ್ತಿ ನಿಮ್ಮಲ್ಲಿಲ್ಲ ಎಂದು ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಲೋಕಸಭಾ ಚುನಾವಣೆಯ ಆತ್ಮಾವಲೋಕನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂದರ್ಭದಲ್ಲಿ ಶಾಸಕ ಕದಲೂರು ಉದಯ್ ಕಾರ್ಯಕರ್ತರ ವಿರುದ್ಧ ಗುಡುಗಿದ್ದಾರೆ.
‘KRS ಮುಂದಿಟ್ಟುಕೊಂಡು ಜೆಡಿಎಸ್ ಮತ ಗೀಟಿಸಿಕೊಂಡ್ರು.’ ಚುನಾವಣೆಯಲ್ಲಿ KRSನಿಂದ ನೀರು ಬಿಟ್ಟಿಲ್ಲ ಎಂಬ ಅಪಪ್ರಚಾರ ಮಾಡಿದ್ರು. ಅಂದಿನ ಕಾನೂನುಗಳೇ ಬೇರೆ ಇಂದು ಕಾನೂನುಗಳು ಮಾರ್ಪಟ್ಟಿವೆ.
ನೀರನ್ನ ಏಕಾಏಕಿ ನಾವು ಕೊಡಲು ಹೇಗೆ ಸಾಧ್ಯವಿದೆ? ಅದಕ್ಕೆ ಆದಂಥ ಒಂದು ಸಮಿತಿ ಇದೆ ಅದನ್ನ ನೀವು ಮತದಾರರಿಗೆ ತಿಳಿಸಲು ಏಕೆ ಸಾಧ್ಯವಾಗಲಿಲ್ಲ? ಜೆಡಿಎಸ್ ನವರು ಬಹಳಷ್ಟು ಸುಳ್ಳು ಹೇಳ್ತಾರೆ ಎಂದು ಶಾಸಕ ಕದಲೂರು ಉದಯ್ ಹೇಳಿದ್ದಾರೆ.
.