ಬೆಂಗಳೂರು: ನಮ್ಮ ಹಣವನ್ನು ನಮ್ಮ ಜನರ ಅನುಕೂಲಕ್ಕೆ ಹೇಗೆ ಖರ್ಚು ಮಾಡಬೇಕೆಂಬುದನ್ನು ನೀವು ನಮಗೆ ಹೇಳಿಕೊಡುವ ಅಗತ್ಯವಿಲ್ಲ. ನಾವು ಐದಲ್ಲ ಇನ್ನೂ ಹತ್ತು ಗ್ಯಾರಂಟಿಗಳನ್ನು ಬೇಕಾದರೂ ನಮ್ಮ ಜನರಿಗಾಗಿ ಕೊಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ನಾವು ನಿಮ್ಮ ಬಜೆಟ್‌ನ ಲೆಕ್ಕ ಕೇಳಬೇಕು. ಏಕೆಂದರೆ ನೀವು ಖರ್ಚು ಮಾಡುತ್ತಿರುವುದು ನಮ್ಮ ರಾಜ್ಯದ ತೆರಿಗೆ ಹಣ. ನಮ್ಮ ಪಾಲಿನ ಹಣ. ನೀವು ಬೇಕಾಬಿಟ್ಟಿ ಶ್ರೀಮಂತರ ಸಾಲ ಮನ್ನಾ ಮಾಡಿ, ನಿಮ್ಮ ಕಾರ್ಪೊರೇಟ್ ಗೆಳೆಯರ ತೆರಿಗೆ ಮನ್ನಾ ಮಾಡಿ, ನಮ್ಮ ರಾಜ್ಯದ ಹಣವನ್ನು ನಮಗೆ ಕೊಡದೇ ಬೇಕಾಬಿಟ್ಟಿ ಖರ್ಚು ಮಾಡುತ್ತಿರುವುದನ್ನು ನಾವು ಪ್ರಶ್ನಿಸಬೇಕಿದೆ ಎಂದು ಹೇಳಿದ್ದಾರೆ.