ಚಿಕ್ಕಮಗಳೂರು : ಇತ್ತೀಚಿಗೆ ಈ ಹೃದಯಾಘಾತ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ.ಚಿಕ್ಕ ಮಕ್ಕಳು, ಯುವ ಜನತೆ ಹಾಗೂ ವಯೋವೃದ್ಧರನ್ನು ಸಹ ಈ ಒಂದು ಹೃದಯಘಾತ ಸಹಜ ಕಾಯಿಲೆಯಂತಾಗಿದೆ.ಇದೀಗ ಚಿಕ್ಕಮಂಗಳುರಿನಲ್ಲಿ ಕಾಫಿ ಕಣದಲ್ಲಿ ಇರುವಾಗಲೇ ಬಿಜೆಪಿಯ ಯುವ ಮುಖಂಡನಿಗೆ ಹೃದಯಾಘಾತ ಸಂಭವಿಸಿ ಸವನಪ್ಪಿದ್ದಾರೆ.
ಹೌದು ಚಿಕ್ಕಮಗಳೂರಿನ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಯುವ ಕೃಷಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 35 ವರ್ಷ ವಯಸ್ಸಿನ ಹೆಚ್.ಆರ್.ಚೇತನ್ ಎಂಬಾತನೇ ಮೃತ ದುರ್ದೈವಿಯಾಗಿದ್ದು, ಇವರು ಬಿಜೆಪಿಯ ಯುವ ಮುಖಂಡರಾಗಿದ್ದರು ಎಂದು ತಿಳಿದುಬಂದಿದೆ.
ಇಂದು ಬೆಳಿಗ್ಗೆ ಹೊತ್ತು ಕಾಫಿ ಕಣದಲ್ಲಿದ್ದಾಗ, ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬಾಳೆ ಹೊನ್ನೂರು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಮಾರ್ಗಮಧ್ಯದಲ್ಲೇ ಚೇತನ್ ಸಾವನ್ನಪ್ಪಿದ್ದಾರೆ. ಮೃತ ಚೇತನ್ ಗೆ ಇಬ್ಬರು ಪುಟ್ಟ ಮಕ್ಕಳು ಇದ್ದರು ಎನ್ನಲಾಗಿದೆ. ಈ ಒಂದು ಸಾವಿನಿಂದ ಕುಟುಂಬದಲ್ಲಿ ಇದೀಗ ಶೋಕ ಮಡುಗಟ್ಟಿದೆ.