ಮೈಸೂರು: 2023ರಲ್ಲಿ ಐಎಎಸ್ ಪಾಸು ಮಾಡಿರುವ ಮೈಸೂರಿನ ಯುವತಿ ಪೂಜಾ ಮುಕುಂದ್ ಅವರು ‘ದೆಹಲಿ ಸೆಂಟ್ರಲ್ ಮುನ್ಸಿಪಲ್ ಕಾರ್ಪೋರೇಷನ್’ ನ ಡೆಪ್ಯೂಟಿ ಕಮಿಷನರ್ ಆಗಿ ನೇಮಕಗೊಂಡಿದ್ದು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಇಂದು ‘ ದೆಹಲಿ ಸೆಂಟ್ರಲ್ ಮುನ್ಸಿಪಲ್ ಕಾರ್ಪೋರೇಷನ್ ಡೆಪ್ಯೂಟಿ ಕಮಿಷನರ್ ಆಗಿ ಐಎಎಸ್ ಅಧಿಕಾರಿ ಪೂಜಾ ಮುಕುಂದ್ ಅಧಿಕಾರ ಸ್ವೀಕರಿಸಿದರು. ಇವರಿಗೆ ಐಎಎಸ್ ಅಧಿಕಾರಿ ಕುಮಾರ್ ಅಭಿಷೇಕ್ ಅಧಿಕಾರ ಹಸ್ತಾಂತರ ಮಾಡಿದರು.
ಮೈಸೂರಿನ ಎಂ.ಜಿ.ಬೇಂದ್ರೆ ಮತ್ತು ಪದ್ಮಾವತಿ.ಎಂ ದಂಪತಿಯ ಪುತ್ರಿ ಎಂ.ಪೂಜಾ ಅವರು 2023 ರಲ್ಲಿ ಕೋಚಿಂಗ್ ಹೋಗದೇ ಮನೆಯಲ್ಲೇ ಕುಳಿತು ಅಭ್ಯಾಸ ಮಾಡಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 390 ರ್ಯಾಂಕ್ ಪಡೆದು ಐಎಎಸ್ ಆಗಿ AGMUT ಕೇಡರ್ ನಲ್ಲಿ ಆಯ್ಕೆಯಾಗಿದ್ದರು.
ನಂತರ ತರಬೇತಿ ಪಡೆದು ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ಹುದ್ದೆ ನಿರ್ವಹಿಸಿ ಇದೀಗ ದೆಹಲಿ ಸೆಂಟ್ರಲ್ ಮುನ್ಸಿಪಲ್ ಕಾರ್ಪೋರೇಷನ್ ನ ಡೆಪ್ಯೂಟಿ ಕಮಿಷನರ್ ಆಗಿ ನೇಮಕಕೊಂಡಿದ್ದುಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.