Thursday, April 17, 2025
Google search engine

Homeಅಪರಾಧಮಹಡಿ ಮೇಲಿಂದ ಎಸಿ ಬಾಕ್ಸ್ ಬಿದ್ದು ಯುವಕ ಸಾವು: ಮತ್ತೋರ್ವ ಗಂಭೀರ ಗಾಯ

ಮಹಡಿ ಮೇಲಿಂದ ಎಸಿ ಬಾಕ್ಸ್ ಬಿದ್ದು ಯುವಕ ಸಾವು: ಮತ್ತೋರ್ವ ಗಂಭೀರ ಗಾಯ

ದೆಹಲಿ: ಆಕಸ್ಮಿಕವಾಗಿ ಎಸಿ ಬಾಕ್ಸ್ ಎರಡನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ದೆಹಲಿಯ ರೋಲ್‌ಬಾಗ್ ಪ್ರದೇಶದ ಸಮೀಪ ನಡೆದಿದೆ.

ಇಬ್ಬರು ಸ್ನೇಹಿತರು ರಸ್ತೆಯಲ್ಲಿ ಮಾತನಾಡುತ್ತಾ ನಿಂತಿದ್ದಾಗ ಹೊರಗೆ ಅಳವಡಿಸಿದ್ದ ಎಸಿ ಬಾಕ್ಸ್ ಬಿದ್ದಿದೆ. ಜಿತೇಶ್ ಎಂಬಾತ ಸ್ಕೂಟರ್‌ನಲ್ಲಿ ಕುಳಿತು ಪ್ರಾಂಶು ಅವರೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ವೇಳೆ ವೈದ್ಯರು ಜಿತೇಶ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದದ್ದು ಪ್ರಾಂಶು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ೧೨೫ (ಎ) (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಮತ್ತು ೧೦೬ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular