Wednesday, April 9, 2025
Google search engine

Homeಅಪರಾಧಕಾಪು ಬೀಚ್ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆ: ಮುಂದುವರಿದ ಹುಡುಕಾಟ

ಕಾಪು ಬೀಚ್ ಬಳಿ ಬೈಕ್ ಬಿಟ್ಟು ಯುವಕ ನಾಪತ್ತೆ: ಮುಂದುವರಿದ ಹುಡುಕಾಟ

ಕಾಪು: ಯುವಕನೋರ್ವ ಬೀಚ್ ಬಳಿ ಬೈಕ್ ಇಟ್ಟು ನಿಗೂಢವಾಗಿ ನಾಪತ್ತೆಯಾದ ಘಟನೆ ಕಾಪುವಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್ ಅವರ ಪುತ್ರ ಕರಣ್ ಸಾಲ್ಯಾನ್ (20) ನಾಪತ್ತೆಯಾದ ಯುವಕ.

ಈತ ಗುರುವಾರ ಸಂಜೆಯಿಂದ ನಾಪತ್ತೆಯಾಗಿದ್ದು ಶುಕ್ರವಾರ ಬೆಳಿಗ್ಗೆ ಕಾಪು ಬೀಚ್ ಬಳಿ ಬೈಕ್, ಬೆಲೆಬಾಳುವ ಫೋನ್, ನಗದು ಸಹಿತವಾಗಿ ಪರ್ಸ್ ಪತ್ತೆಯಾಗಿದೆ.‌

ಮನೆಯವರು ಮತ್ತು ಸ್ಥಳೀಯರು ಕಾಪು ಬೀಚ್ ಬಳಿ, ಸಮುದ್ರ ತೀರ ಮತ್ತು ಸಮುದ್ರದಲ್ಲಿ ತೀವ್ರ ಹುಡುಕಾಟ ನಡೆಸಿದ್ದು, ಶನಿವಾರವೂ ಹುಡುಕಾಟ ಮುಂದುವರಿಸಿದ್ದಾರೆ.

ಮಗ ನಾಪತ್ತೆಯಾಗಿರುವ ಬಗ್ಗೆ ತುಳಸಿ ಸಾಲ್ಯಾನ್ ಕಾಪು ಪೊಲೀಸ್ ಠಾಣೆಗೆ ದೂರು‌ ನೀಡಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ‌‌.

RELATED ARTICLES
- Advertisment -
Google search engine

Most Popular